ಪೆಟ್ರೋಲ್ ಡೀಸೆಲ್ ಜಿಎಸ್ ಟಿ ವ್ಯಾಪ್ತಿಗೆ ತರುವಂತೆ ಬಿ ಎಸ್ ಪಿ ಪ್ರತಿಭಟನೆ

0
ಪೆಟ್ರೋಲ ಮತ್ತು ಡಿಸೇಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ ಜಿ ಎಸ್ ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ
ಚಿಕ್ಕೋಡಿ  ಜಿಲ್ಲೆ
ಬಹುಜನ ಸಮಾಜ ಪಾರ್ಟಿ ವತಿಯಿಂದ ಅಥಣಿ ಉಪ ತಹಶಿಲ್ದಾರ ಮಹದೇವ ಬಿರಾದಾರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಎಲ್ಲರಿಗೂ ತಿಳಿದಿರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ  ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡ ಮುನ್ನೂರಕ್ಕೂ ಹೆಚ್ಚು ಪ್ರತಿಶತ ತೆರಿಗೆ ವಿಧಿಸಿವೆ.
ಇದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 100 ರೂಪಾಯಿಗಿಂತಲೂ ಹೆಚ್ಚಾಗಿದೆ.ಜಗತ್ತಿನ ಯಾವ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇಷ್ಟೊಂದು ತೆರಿಗೆ ವಿಧಿಸಿ ತನ್ನ ದೇಶದ ಪ್ರಜೆಗಳನ್ನು ಶೋಷಣೆ ಮಾಡುವ ಇನ್ನೊಂದು ಸರ್ಕಾರವಿಲ್ಲ.ಕೋವಿಡ್ – 19 ನ್ನು ಸರಿಯಾಗಿ ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು ರೋಗಿಗಳಿಗೆ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಔಷಧೋಪಚಾರಗಳನ್ನು ಸಕಾಲಕ್ಕೆ ಒದಗಿಸದೆ ಲಕ್ಷಾಂತರ ಜನ ಬಲಿಯಾಗಿದ್ದಾರೆ.
ಮತ್ತು ಲಾಕ್ ಡೌನ್ ನಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬಡತನ ಮತ್ತು ಹಸಿವಿನಿಂದ ತತ್ತರಿಸಿದ್ದು ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ.
ಅಡುಗೆ ಎಣ್ಣೆ  ಲೀಟರ್ ಗೆ 200 ರೂಪಾಯಿ ದಾಟಿದೆ. ಅಡುಗೆ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಸಮೀಪಿಸುತ್ತಿದೆ.
ಇವುಗಳ ಜೊತೆಗೆ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ.ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ನೆರವಿಗೆ ನಿಲ್ಲಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ  ತೆರಿಗೆ ವಿಧಿಸಿ ಜನರನ್ನು ಮತ್ತಷ್ಟು ಶೋಷಣೆ ಮಾಡುತ್ತಿರುವದರಿಂದ ರಾಷ್ಟ್ರಪತಿಗಳು ತಾವು ತಕ್ಷಣ ಮಧ್ಯಪ್ರವೇಶ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ
 ಅವೈಜ್ಞಾನಿಕ ತೆರಿಗೆ ಏರಿಕೆಯನ್ನು ಕೈಬಿಡುವಂತೆ ಸೂಚನೆ ನೀಡಬೇಕು.ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಸೂಚಿಸಬೇಕೆಂದು ಬಿಎಸ್ ಪಿ ಜಿಲ್ಲಾಧ್ಯಕ್ಷ ಬಾಹುಸಾಹೆಬ ಕಾಂಬಳೆ ಆಗ್ರಹಿಸಿದರು.
ಈ ವೇಳೆ ನ್ಯಾಯವಾದಿ ಗೀತಾ ಕಾಂಬಳೆ, ಡಾ. ಹರೀಶ ವಗ್ಗಿ,ಗಜಾನನ ಕಾಂಬಳೆ,ಮಹೇಶ್ ಅಬ್ಬಿಹಾಳ,ಶ್ರೀಕಾಂತ ಕಾಂಬಳೆ,ಕಪಿಲ ಕಾಂಬಳೆ,ಮಹಾವೀರ ಕಾಂಬಳೆ,ಸಾಕ್ಷಿ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');