ಗ್ರಾಮೀಣ ಭಾಗದ ಜನರಿಗೆ ಔಷಧಿ ಕಳಿಸಿ ಮಾನವೀಯತೆ ಮೆರೆದ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ

0
ಅಥಣಿ : ಒಂದು ಕಡೆ ಲಾಕ್ ಡೌನನಿಂದ ಗ್ರಾಮೀಣ ಭಾಗದ ಜನರು ನಿತ್ಯದ ದುಡಿಮೆ ಇಲ್ಲದೆ ಉಪಜೀವನ ನಡೆಸುವದು ಕಷ್ಟವಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವೆಡೆ ಮೂಲಭೂತ ಸೌಲಭ್ಯಗಳು ಇಲ್ಲದೆ ಹಳ್ಳಿಯ ಜನರು ಪರದಾಡುವಂತಾಗಿದೆ.
ಇದನ್ನು ಅರಿತ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಗ್ರಾಮೀಣ ಭಾಗದ ಜನರು ಕೋವಿಡ್ ನಿಂದ ರಕ್ಷಣೆ ಪಡೆಯಲು ಅಗತ್ಯ ಔಷಧಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ,ಕಾಗವಾಡ,ಕುಡಚಿ,ನಿಪ್ಪಾಣಿ,ಚಿಕ್ಕೋಡಿ ಸೇರಿದಂತೆ ಹಲವೆಡೆ ಉಚಿತವಾಗಿ ಹಂಚಿದ್ದು  ಆಯಾ ತಾಲ್ಲೂಕು ಆಸ್ಪತ್ರೆಗಳ ಮೂಲಕ ಅಗತ್ಯ ಇರುವ ಜನರಿಗೆ ಔಷಧಿ ತಲುಪಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಮೊದಲು ತಾಲೂಕು ಆಸ್ಪತ್ರೆಗಳಿಗೆ ವಿದೇಶಗಳಿಂದ ಕನ್ನಡಿಗರು ಕಳಿಸಿದ್ದ ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನ್ ತಲುಪಿಸಿದ್ದ ಪೋಲಿಸರು ಈಗ ಔಷಧಿ ಮತ್ತು ಮಾತ್ರೆಗಳನ್ನು ಕೊಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಆಯಾ ಪೋಲಿಸ್ ಠಾಣೆಗಳ ಮೂಲಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರಿಗೆ ಔಷಧಿ ಮತ್ತು ಅಗತ್ಯ ಮಾತ್ರೆಗಳು ಹಾಗೂ ಇಂಜೆಕ್ಷನ್ ವಿತರಣೆ ಮಾಡಲಾಗಿದ್ದು ಅಥಣಿ ತಾಲೂಕು ಆಸ್ಪತ್ರೆಗೆ ಅಜಿತ್ರೋ ಮೈಸಿನ್,ಬಿ ಕಾಂಪ್ಲೆಕ್ಸ್ ಟ್ಯಾಬ್ಲೆಟ್, ಡೈಕ್ಲಾಕ್ಸಿನ್,ಪ್ಯಾರಾಸೆಟಮಲ್,ಮಾತ್ರೆಗಳನ್ನು ಒಳಗೊಂಡ ಕೋವಿಡ್ ಚಿಕಿತ್ಸಾ ಕಿಟ್ ಗಳನ್ನು ಒಳಗೊಂಡ ನಾಲ್ಕು ಬಾಕ್ಸ ನಷ್ಟು ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ ತಲುಪಿಸಲಾಯಿತು.
ಈ ವೇಳೆ ಮಾತನಾಡಿದ ಅಥಣಿ ಸಿ ಪಿ ಐ ಶಂಕರಗೌಡ ಬಸನಗೌಡರ ಬೆಳಗಾವಿ ಎಸ್ ಪಿ ಅವರ ಕಚೇರಿಯಿಂದ ಅಥಣಿ ಠಾಣೆಗೆ ಬಂದಿದ್ದ ಕೊರೊನಾ ಕಿಟ್ ಗಳನ್ನು ಒಳಗೊಂಡ ಔಷಧಿಯ ಬಾಕ್ಸಗಳನ್ನು ಇಂದು ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಹಸ್ತಾಂತರ ಮಾಡಿದ್ದು ಗ್ರಾಮೀಣ ಭಾಗದ ಜನರು ಕೊರೊನಾ ಸೊಂಕಿಗೆ ಒಳಗಾದರೆ
ಭಯಪಡದೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯ ಮೂಲಕ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಕೊರೊನಾ ಲಕ್ಷಣ ಇರುವ ಗ್ರಾಮೀಣ ಭಾಗದ ಜನರು ಈ ಔಷಧಿಯನ್ನು ತೆಗೆದುಕೊಳ್ಳುವ ಮೂಲಕ ಗುಣಮುಖರಾಗಬೇಕು ಅಲ್ಲದೆ ಅಕ್ಕಪಕ್ಕದ ಮನೆಗಳಲ್ಲಿ ಸೊಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಇದ್ದರೆ ಕೂಡಲೆ ಸ್ಥಳೀಯ ಪಂಚಾಯತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಕೋವಿಡ್ ಹರಡದಂತೆ ಸಹಕರಿಸಬೇಕಾಗಿದೆ ಎಂದರು.
ಈ ವೇಳೆ ಅಥಣಿ ಪಿ ಎಸ್ ಐ ಕುಮಾರ ಹಾಡಕಾರ,ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ್ ಬಿ ಜಿ ಕನಮಡಿ,ಡಾಕ್ಟರ್  ಸಿ ಎಸ್ ಪಾಟೀಲ, ಡಾಕ್ಟರ್ ಮೋಹನ ಕುಮಾರ,ಮತ್ತು ಪೋಲಿಸ್ ಸಿಬ್ಬಂದಿಗಳಾದ ವಿಜಯ ನರಗಟ್ಟಿ,ಸಂಜೀವ ಮಾಳವ್ವಗೋಳ,ಪ್ರಕಾಶ ಪಾಟೀಲ,ಸಿದ್ದು ನ್ಯಾಮಗೌಡ,ಸೇರಿದಂತೆ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');