ವ್ಯಾಕ್ಸಿನ್ ಉಚಿತ ಹಂಚಿಕೆಗೆ ಆಗ್ರಹಿಸಿ ಪ್ರತಿಭಟನೆ

0
ಅಥಣಿ: ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಡೆದು ಕೊವಿಡ್ ಲಸಿಕೆ ನೀಡಲಾಗುತ್ತಿದ್ದು ಉಚಿತವಾಗಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಬಸನಗೌಡ ಪಾಟೀಲ ಬಮನಾಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

 

ಈ ವೇಳೆ ಮಾತನಾಡಿದ ಬಸನಗೌಡ ಪಾಟೀಲ ಬಮನಾಳ ಸರ್ಕಾರದಿಂದ ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡುವಂತೆ ಕೂಡಲೇ ಆದೇಶ ಮಾಡಬೇಕು ಖಾಸಗಿ ಆಸ್ಪತ್ರೆಗಳಿಗೆ ಆದೇಶ ಮಾಡಬೇಕು ಇಲ್ಲವಾದರೆ ಬಡವರು ಮಧ್ಯಮ ವರ್ಗದವರಿಗೆ ಅನ್ಯಾಯವಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆಯಾಗಿರುವ ಕೋವಿಶಿಲ್ಡ ಮತ್ತು ಕೋವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗೆ ಹೇಗೆ ಪೂರೈಕೆ ಆಗುತ್ತಿದೆ ಎಂದು ಪ್ರಶ್ನಿಸಿದ ಅವರು ಇಲ್ಲದಿದ್ದರೆ ರಾಜ್ಯದ ಶಾಸಕ ಸಚೀವರು ಮತ್ತು ಮುಖ್ಯಮಂತ್ರಿ ಸಾಮೂಹಿಕ ರಾಜಿನಾಮೆ ಕೊಟ್ಟು  ಅಥಣಿ ಪಟ್ಟಣದ ವೀರರಾಣಿ
ಚೆನ್ನಮ್ಮ ಸರ್ಕಲ್ ನಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ವಿಡಿಯೋ ಕಳಿಸುವ ಮೂಲಕ ಮನವಿ ಸಲ್ಲಿಸಿದರು.ಈ ವೇಳೆ ಶ್ರೀಶೈಲ ಪೂಜಾರಿ, ಸಿದಗೌಡ ಹಿಪ್ಪರಗಿ, ಅಪ್ಪು ಪಾಟೀಲ, ಸುನೀಲ ಶೇಡಬಾಳೆ,ಆನಂದ ಬೆಳವಲ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');