ಪೌರ ಕಾರ್ಮಿಕರಿಗೆ ಎಲ್ ಐ ಸಿ ನೌಕರರಿಂದ ಪಡಿತರ ವಿತರಣೆ

0
ಅಥಣಿ :ಕೊರೊನಾ ನಿಜವಾದ ವಾರಿಯರ್ ಗಳು ಎಂದು ಜನರಿಂದ ಮೆಚ್ಚುಗೆ ಪಡೆಯುತ್ತಿದ್ದು ಸರ್ಕಾರ ಪೌರ ಕಾರ್ಮಿಕರನ್ನು ಪ್ರಂಟ್ ಲೈನ್ ವಾರಿಯರ್ಸ ಎಂದು ಗುರುತಿಸಿದ್ದರೂ ಕೂಡ ಆರ್ಥಿಕ ಸಂಕಷ್ಟದಲ್ಲಿ ದಿನಗಳನ್ನು ದೂಡುವ ಸ್ಥಿತಿಯಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರು ಸೇರಿದಂತೆ ನೇರ ಸಂಭಾವನೆ ಪಡೆಯುವ 52 ಜನ ಕಾರ್ಮಿಕರನ್ನು ಒಳಗೊಂಡ ಎಪ್ಪತ್ತು ಜನ ಕಾರ್ಮಿಕರಿಗೆ ಅಥಣಿ ಪಟ್ಟಣದ ಎಲ್ ಐ ಸಿ ನೌಕರರು ಪಡಿತರ ಕಿಟ್ ವಿತರಣೆ ಮಾಡಿದರು.
 
ಈ ವೇಳೆ ಎಲ್ ಐ ಸಿ ಯ ಮ್ಯಾನೇಜರ್ ಪ್ರಕಾಶ ಭಗಟೆ ಮಾತನಾಡಿ ನಸುಕಿನಲ್ಲಿ ಜನರು ಏಳುವ  ಮೊದಲೆ ತಮ್ಮ ಕೆಲಸಕ್ಕೆ ಹಾಜರಾಗುವ ಮತ್ತು ಮಳೆ,ಗಾಳಿ,ಚಳಿ,ಬಿಸಿಲು ಎನ್ನದೆ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರಿಗಾಗಿ ತಮ್ಮ ಜೀವವನ್ನು ಮೇಣದ ಬತ್ತಿಯಂತೆ ತೇಯುವ ನಿಜವಾದ ಸಮಾಜ ಸೇವಕರು ಎಂದರೆ ಅದು ಪೌರ ಕಾರ್ಮಿಕರು.ಸ್ವಚ್ಚತೆಯನ್ನು ಕಾಪಾಡಿ ಸುಂದರ ಬದುಕು ಕಟ್ಟಿ ಕೊಡುವ ಅವರ ಬದುಕಿಗೆ ನಮ್ಮಿಂದ ಆದಷ್ಟು ಸಹಾಯವನ್ನು ನಾವು ಮಾಡುತ್ತಿದ್ದೇವೆ ಎಂದರು.ಈ ವೇಳೆ ಎಲ್ ಎಚ್ ವಿವೇಕಾನಂದ,ರೂಪಾ ಜೋಶಿ,ಜ್ಯೋತಿ ಪಾಟೀಲ, ಸಂಧ್ಯಾ ಅಂಬೇಕರ,ವಿಠ್ಠಲ ಗುರವ,ಶ್ರೀಶೈಲ್ ಬಾಸಿಂಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');