ಡಿಸಿಎಮ್ ಲಕ್ಷ್ಮಣ ಸವದಿಯಿಂದ ಮುಂದುವರೆದ ಜನಪರ ಕಾಳಜಿಗೆ ಜನರ ಮೆಚ್ಚುಗೆ

0

ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿಯವರ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನವತಿಯಿಂದ ಆಹಾರಧಾನ್ಯ ವಿತರಣೆ ಕಾರ್ಯ ಇಂದು ಹದಿನೈದನೆ ದಿನ ಐಗಳಿ ಮತ್ತು ಫಡತರವಾಡಿ ಗ್ರಾಮದಲ್ಲಿ ನಡೆಯಿತು.

ಹಸಿದ ಹೊಟ್ಟೆಗೆ ಅನ್ನ ಹಾಕುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರಿಗೆ ಬೆನ್ನೆಲುಬಾಗಿ ನಿಂತ ಬಿಜೆಪಿ ಯುವ ನಾಯಕ ಶ್ರೀ ಚಿದಾನಂದ ಸವದಿ ಮತ್ತು ಯುವ ಕಾರ್ಯಕರ್ತರು; ಇಂದಿನವರೆಗೆ ಅಥಣಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 68000 ಆಹಾರಧಾನ್ಯ ಮತ್ತು ದಿನಸಿ ಒಳಗೊಂಡ ಕಿಟ್ ಗಳನ್ನು  ವಿತರಿಸಿದ್ದಾರೆ.

ಇಂದು ಐಗಳಿ ಮತ್ತು ಫಡತರವಾಡಿ ಗ್ರಾಮದಲ್ಲಿ 3500 ಆಹಾರಧಾನ್ಯ ಕಿಟ್ ಗಳನ್ನು ವಿತರಿಸಲಾಯಿತು.ಹಸಿದವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಮುಂದಾಗಿರುವ ಡಿಸಿಎಮ್ ಲಕ್ಷ್ಮಣ ಸವದಿ ಅವರ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನ ಸದ್ಯ ಜಾತಿ ಭೇಧ ಮಾಡದೆ,ಬಡವ ಸಿರಿವಂತ ಎಂಬ ಬೇಧ ಭಾವ ತೋರದೆ ಕೊರೊನಾ ದಂತಹ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಇಂದಾಗಿ ಜನಜೀವನ

 ಅಸ್ಥವ್ಯಸ್ಥವಾಗಿದ್ದನ್ನು ಅರಿತು ಜನಸೇವೆಯೆ ಜನಾರ್ಧನ ಸೇವೆ ಎಂದು ಪಡಿತರ ಹಂಚುತ್ತಿದ್ದು ಕ್ಷೇತ್ರದ ಜನರ ಬಗ್ಗೆ ಮತ್ತು ಜನಸಾಮಾನ್ಯರ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಉದ್ಯಮಿ ಸಂತೋಷ ಸಾವಡ್ಕರ ಹೇಳಿದರು.ಈ ವೇಳೆ ಐಗಳಿ ಮತ್ತು ಪಡತರವಾಡಿ ಗ್ರಾಮದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');