ದೊಡ್ಡವರ ಬಗ್ಗೆ ಮಾತನಾಡುವಾಗ “ತೂಕ” ಇರಲಿ: ತಿವಿದ ಗೌಡ್ರ ಮಗ ನಿಖಿಲ್

0

ತುಮಕೂರು: ಯಾರೇ ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಮನುಷ್ಯ, ಮನುಷ್ಯನಿಗೆ ಬೆಲೆ ಕೊಡೋದನ್ನು ಮೊದಲು ಕಲಿಯಬೇಕು, ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ತೂಕ ಇರಬೇಕೆಂದು ನಿಖಿಲ್​ ಕುಮಾರಸ್ವಾಮಿ  ಜಮೀರಗೆ ತಿವಿದಿದ್ದಾರೆ.

ತುಮಕೂರು ತಾಲ್ಲೂಕಿನ ಬಳಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್​ ಕುಮಾರಸ್ವಾಮಿ ಅವರು, ಬೋಜೆಗೌಡ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಒಬ್ಬ ಜನಪ್ರತಿನಿಧಿಯಾಗಿ ಮಾತಾಡಬೇಕಾದರೇ ತೂಕವಾಗಿ ಮಾತಾಡಬೇಕು. ರಾಜಕೀಯವಾಗಿ ಯಾವ ಥರ ಬೇಕಾದ್ರೂ ಮಾತಾಡಿ. ಎರಡು ಬಾರಿ ಸಿಎಂ‌ ಅನ್ನೋದನ್ನು ಬದಿಗಿಟ್ಟು ಮಾತಾಡೋಣ. ಆದರೆ ಮನುಷ್ಯ, ಮನುಷ್ಯನಿಗೆ ಬೆಲೆ ಕೊಡೋದನ್ನ ಮೊದಲು ಕಲಿಯಬೇಕು ಎಂದರು.

ಮಾಧ್ಯಮಗಳಲ್ಲಿ ಮಾತನಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಸಂಸ್ಕೃತಿ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು. ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಸುಮಾರು ಏಳೆಂಟು ವರ್ಷಗಳಾಗಿದೆ. ಮೇಖ್ರಿ ಸರ್ಕಲ್ ನಲ್ಲಿರೋ ಮನೆಯನ್ನು ಕುಮಾರಣ್ಣ ಗೆಸ್ಟ್​​ಹೌಸ್ ಥರ ಉಪಯೋಗಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಆ ಮನೆಯನ್ನು ಕ್ಲಿಯರ್ ಮಾಡಿಸಿಕೊಡಿ ಎಂದಿದ್ದರು. ಮನೆ ಖಾಲಿ ಇದ್ದರಿಂದ ನನ್ನ ಸುತ್ತಮುತ್ತ ಕೆಲಸ ಮಾಡೋ ಹುಡುಗರು ಅಲ್ಲಿ ವಾಸ ಮಾಡುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಎಲ್ಲ ಹುಡುಗರು ಊರಿಗೆ ತೆರಳಿದ ಕಾರಣ ಮನೆಗೆ ಬೀಗ ಹಾಕಲಾಗಿತ್ತು. ವಸ್ತುಗಳನ್ನು ಚೆಲ್ಲಾಪಿಲಿ ಮಾಡಲಾಗಿದೆ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ದೊಡ್ಡವರ ವಿಚಾರಕ್ಕೆ ಹೋಗಲ.

ಒಂದು ಸಮಯದಲ್ಲಿ ನಮ್ಮ ನಾಯಕರ ಜೊತೆ ಬಹಳ ಆತ್ಮೀಯವಾಗಿ‌ದ್ರು. ರಾಜಕಾರಣದಲ್ಲಿ ಅವರು ಬೆಳೆಯೋದಕ್ಕೆ ನಮ್ಮ ನಾಯಕರದ್ದೂ ಕೂಡ ಕೊಡುಗೆ ಇದೆ. ಅವರು ನಿಖಿಲ್ ಇನ್ನೂ ಹುಡುಗ ಅಂದಿದ್ದಾರೆ.. ಹೌದು ನಾನು ಇನ್ನೂ ಹುಡುಗಾನೇ, ನನಗೇನು ವಯಸ್ಸಾಗಿಲ್ಲ, ನಾನ್ ಇನ್ನೂ ಚಿಕ್ಕಹುಡುಗಾನೇ. ಆದರೆ ನಾವು ಮಾತಾಡಬೇಕಾದರೇ ಸಮಾಜಕ್ಕೆ ಯಾವ ಸಂದೇಶ ಕೊಡ್ತೀವಿ ಅನ್ನೋದನ್ನ ಯೋಚನೆ ಮಾಡಬೇಕು. ಏಕವಚನದಲ್ಲಿ ಮಾತಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದು ನಾವ್ ಯೋಚನೆ ಮಾಡಬೇಕು ಎಂದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');