2021ನೇ ಮುಂಗಾರು ಹಂಗಾಮಿನ ಹಿನ್ನಲೆ ತೋಟಗಾರಿಕೆ ಬೆಳೆಗಳ ವಿಮೆ ಪಾವತಿಸಲು ದಿನಾಂಕ ನಿಗದಿ

0

ಬೆಳಗಾವಿ, ಜೂ.10 : 2021ನೇ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ದ್ರಾಕ್ಷಿ, ದಾಳಿಂಬೆ, ಹಸಿ ಮೆಣಸಿನಕಾಯಿ(ನೀ) ಬೆಳೆಗಳಿಗೆ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿಯಲ್ಲಿ ಅರಿಷಿಣ, ಆಲೂಗಡ್ಡೆ (ಮಳೆಯಾಶ್ರಿತ), ಟೊಮೆಟೋ, ಈರುಳ್ಳಿ (ನೀರಾವರಿ/ಮಳೆಯಾಶ್ರಿತ) ಹಾಗೂ ಎಲೆಕೋಸು ಬೆಳೆಗಳಿಗೆ
ವಿಮೆ ಪಾವತಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನೀರ್ದೆಶಕ ರವೀಂದ್ರ ಹಕಾಟಿ ತಿಳಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ದ್ರಾಕ್ಷಿ, ದಾಳಿಂಬೆ, ಹಸಿ ಮೆಣಸಿನಕಾಯಿ(ನೀ) ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದ್ದು, ಅಥಣಿ ತಾಲ್ಲೂಕಿಗೆ ದ್ರಾಕ್ಷಿ ಹಾಗೂ ದಾಳಿಂಬೆ, ಗೋಕಾಕ ತಾಲೂಕಿಗೆ ದ್ರಾಕ್ಷಿ ಹಾಗೂ ಹಸಿಮೆಣಸಿನಕಾಯಿ (ನಿ), ರಾಯಬಾಗ ತಾಲೂಕಿಗೆ ದ್ರಾಕ್ಷಿ ಮತ್ತು ಬೈಲಹೊಂಗಲ,ಚಿಕ್ಕೋಡಿ, ಹುಕ್ಕೇರಿ ಹಾಗೂ ಸವದತ್ತಿ ತಾಲ್ಲೂಕುಗಳಿಗೆ ಹಸಿಮೆಣಸಿನಕಾಯಿ (ನೀ) ಬೆಳೆಗಳಿಗೆ ಬೆಳೆ ವಿಮಾ ಪಾವತಿಸಲು ಜೂನ್. 30 ಕೊನೆಯ ದಿನಾಂಕವಾಗಿರುತ್ತದೆ.
ಪ್ರತಿ ಹೆಕ್ಟೇರ್ ದ್ರಾಕ್ಷಿ ಬೆಳೆಗೆ ರೂ.14,000, ದಾಳಿಂಬೆ ಬೆಳೆಗೆ ರೂ.6,350 ಹಾಗೂ ಹಸಿಮೆಣಸಿನಕಾಯಿ (ನೀ) ಬೆಳೆಗೆ ರೂ. 3,550 ರಂತೆ ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪನೀರ್ದೆಶಕ ರವೀಂದ್ರ ಹಕಾಟಿ ಮಾಹಿತಿ ನೀಡಿದ್ದಾರೆ.
ಅದೇ ರೀತಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಅರಿಷಿಣ, ಆಲೂಗಡ್ಡೆ (ಮಳೆಯಾಶ್ರಿತ), ಟೊಮೆಟೋ, ಈರುಳ್ಳಿ (ನೀರಾವರಿ/ಮಳೆಯಾಶ್ರಿತ) ಹಾಗೂ ಎಲೆಕೋಸು ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ.
ವಿಮೆ ಪಾವತಿಸಲು ಎಲೆಕೋಸು ಬೆಳೆಗೆ ಜುಲೈ 15 ಹಾಗೂ ಉಳಿದ ಬೆಳೆಗಳಿಗೆ ಜುಲೈ 31 ರಂದು ಕೊನೆಯ ದಿನಾಂಕವಾಗಿದೆ.
ಪ್ರತಿ ಹೆಕ್ಟೇರ್ ಅರಿಷಿಣ ಬೆಳೆಗೆ ರೂ.6650 ,ಆಲೂಗಡ್ಡೆ
(ಮಳೆಯಾಶ್ರಿತ) ಬೆಳೆಗೆ ರೂ.1337, ಟೊಮ್ಯಾಟೊ ಬೆಳೆಗೆ ರೂ. 5334, ಈರುಳ್ಳಿ (ನೀರಾವರಿ) ಬೆಳೆಗೆ ರೂ. 3750, ಈರುಳ್ಳಿ (ಮಳೆಯಾಶ್ರಿತ) ಬೆಳೆಗೆ ರೂ. 3500 ಹಾಗೂ ಎಲೆಕೋಸು ಬೆಳೆಗೆ ರೂ. 1430 ರಂತೆ ವಿಮಾ ಕಂತಿನ ಮೊತ್ತವಾಗಿರುತ್ತದೆ.
ಈ ಯೋಜನೆಗಳಿಗೆ ಸಂಬಂಧಪಟ್ಟಂತೆ ಅಧಿಸೂಚಿತ ಗ್ರಾಮ ಪಂಚಾಯತಿ/ಹೋಬಳಿವಾರು ಬೆಳೆಗಳ ವ್ಯಾಪ್ತಿಯ ಕುರಿತು ಸಂಬಂಧಪಟ್ಟ ತಾಲ್ಲೂಕು ಮತ್ತು ಹೋಬಳಿಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ವಿಮೆ ಕಂತು ಪಾವತಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನೀರ್ದೆಶಕ ರವೀಂದ್ರ ಹಕಾಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿ/ತಾಲ್ಲೂಕುಮಟ್ಟದ ತೋಟಗಾರಿಕೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಗಳನ್ನು ಸಂಪರ್ಕಿಸಬಹುದು
ಬೆಳಗಾವಿ : 0831-2431559, ಗೋಕಾಕ: 08332-229382, ಖಾನಾಪೂರ : 08336-223387 ಸವದತ್ತಿ : 08330-222082, ಅಥಣಿ : 08289-285099 ರಾಮದುರ್ಗ : 08335-241512, ರಾಯಬಾಗ : 08331-225049, ಹುಕ್ಕೇರಿ : 08333-265915, ಚಿಕ್ಕೋಡಿ : 08338-274943, ಬೈಲಹೊಂಗಲ : 08288-233758
ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');