ದಾನಿಗಳ ಸಹಕಾರದಿಂದ ಮಾನವೀಯತೆ ಮೆರೆಯುತ್ತಿರುವ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ

0
ಒಂದು ಕಡೆ ಲಾಕ್ ಡೌನ ಹಂತ ಹಂತವಾಗಿ ಸಡಿಲಿಕೆ ಆಗುತ್ತಿದ್ದರು ಕೂಡ ಕಳೆದ ಎರಡು ತಿಂಗಳುಗಳಿಂದ ಗ್ರಾಮೀಣ ಭಾಗದ ಜನರು ನಿತ್ಯದ ದುಡಿಮೆ ಇಲ್ಲದೆ ಉಪಜೀವನ ನಡೆಸುವದು ಕಷ್ಟವಾಗಿದೆ.ಬಹಳಷ್ಟು  ಹಳ್ಳಿಗಳಲ್ಲಿ ಕೈಯ್ಯಲ್ಲಿ ಹಣವಿಲ್ಲದ ಕಾರಣಕ್ಕೆ ಜನರು ತಾವು ಸಾಕಿದ ಕುರಿ ಕೋಳಿಗಳನ್ನು ಹಸು,ಮತ್ತು ಜಾನುವಾರುಗಳನ್ನು ಮಾರುವ ಪರಿಸ್ಥಿತಿ ಎದುರಾಗಿದ್ದು ಕೊರೊನಾ ಸೊಂಕು ದೃಡಪಟ್ಟರೆ ಆಸ್ಪತ್ರೆಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಇದೆ.ಇನ್ನೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಲವೆಡೆ ಮೂಲಭೂತ ಸೌಲಭ್ಯಗಳು ಇಲ್ಲದೆ ಹಳ್ಳಿಯ ಜನರು ಪರದಾಡುವಂತಾಗಿದೆ.
ಇದನ್ನು ಅರಿತ ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಹೈದರಾಬಾದ್ ನಲ್ಲಿ ಇರುವ ತಮ್ಮ ಸ್ನೇಹಿತರು ಆಪ್ತರ ಮೂಲಕ ತಲುಪಿದ ಔಷಧಿಗಳು ಮತ್ತು ಕೆನಡಾ ಕನ್ನಡಿಗರು ಕಳಿಸಿದ ಆಕ್ಸಿಜನ್ ಕಾನ್ಸಂಟ್ರೇಶನ್ ಮಷೀನಗಳನ್ನು ಆಸ್ಪತ್ರೆಗಳಿಗೆ ಉಚಿತವಾಗಿ ಕೊಡುವ ಮೂಲಕ ಜೀವಪರ ಕಾಳಜಿ ಮೆರೆದಿದ್ದಾರೆ.
ಗ್ರಾಮೀಣ ಭಾಗದ ಜನರು ಕೋವಿಡ್ ಮಹಾಮಾರಿಯಿಂದ ರಕ್ಷಣೆ ಪಡೆಯಲು ಅಗತ್ಯ ಇರುವ ಔಷಧಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ,ಕಾಗವಾಡ,ಕುಡಚಿ,ನಿಪ್ಪಾಣಿ,ಚಿಕ್ಕೋಡಿ ಸೇರಿದಂತೆ ಹಲವೆಡೆ ಉಚಿತವಾಗಿ ಹಂಚಿದ್ದು  ಆಯಾ ತಾಲ್ಲೂಕು ಆಸ್ಪತ್ರೆಗಳ ಮೂಲಕ ಅಗತ್ಯ ಇರುವ ಜನರಿಗೆ ಔಷಧಿ ತಲುಪಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಈ ಮೊದಲು ತಾಲೂಕು ಆಸ್ಪತ್ರೆಗಳಿಗೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕಳಿಸಿದ್ದ ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನು ಗಳನ್ನು ತಲುಪಿಸಿದ್ದ ಪೋಲಿಸರು ಈಗ ಔಷಧಿ ಮತ್ತು ಮಾತ್ರೆಗಳನ್ನು ಕೊಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಆಯಾ ಪೋಲಿಸ್ ಠಾಣೆಗಳ ಮೂಲಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯರಿಗೆ ಔಷಧಿ ಮತ್ತು ಅಗತ್ಯ ಮಾತ್ರೆಗಳು ಹಾಗೂ ಇಂಜೆಕ್ಷನ್ ವಿತರಣೆ ಮಾಡಲಾಗುತ್ತಿದ್ದು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ ಮತ್ತು ಪಿಎಸ್ ಐ ರಾಕೇಶ್ ಬಗಲಿ ಅವರ ನೇತೃತ್ವದಲ್ಲಿ ಅಜಿತ್ರೋ ಮೈಸಿನ್,ಬಿ ಕಾಂಪ್ಲೆಕ್ಸ್ ಟ್ಯಾಬ್ಲೆಟ್, ಡೈಕ್ಲಾಕ್ಸಿನ್,ಪ್ಯಾರಾಸೆಟಮಲ್,ಮಾತ್ರೆಗಳನ್ನು ಒಳಗೊಂಡ ಕೋವಿಡ್ ಚಿಕಿತ್ಸಾ ಕಿಟ್ ಗಳನ್ನು ಒಳಗೊಂಡ ನಾಲ್ಕು ಬಾಕ್ಸ ನಷ್ಟು ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ
 ತಲುಪಿಸಲಾಯಿತು.ಈ ವೇಳೆ ಮಾತನಾಡಿದ ಚಿಕ್ಕೋಡಿ ಸಿ ಪಿ ಐ ಆರ್ ಆರ್ ಪಾಟೀಲ ಬೆಳಗಾವಿಯ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರ ಕಚೇರಿಯಿಂದ ಚಿಕ್ಕೋಡಿ ಠಾಣೆಗೆ ಬಂದಿದ್ದ ನಾಲ್ಕು ಆಕ್ಸಿಜನ್ ಕಾನ್ಸಂಟ್ರೇಶನ್ ಮಷೀನ್ ಮತ್ತು ಕೊರೊನಾ ಕಿಟ್ ಗಳನ್ನು ಒಳಗೊಂಡ ಔಷಧಿಯ ಬಾಕ್ಸಗಳನ್ನು ಇಂದು ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಹಸ್ತಾಂತರ ಮಾಡಿದ್ದು ಗ್ರಾಮೀಣ ಭಾಗದ ಜನರು ಕೊರೊನಾ ಸೊಂಕಿಗೆ ಒಳಗಾದರೆ ಭಯಪಡದೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯ ಮೂಲಕ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಕೊರೊನಾ ಲಕ್ಷಣ ಇರುವ ಗ್ರಾಮೀಣ ಭಾಗದ ಜನರು ಈ ಔಷಧಿಯನ್ನು ತೆಗೆದುಕೊಳ್ಳುವ ಮೂಲಕ ಗುಣಮುಖರಾಗಬೇಕು.
ಒಂದು ವೇಳೆ ಸೊಂಕು ಉಲ್ಬಣಿಸಿದರೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದರು. ಅಲ್ಲದೆ ಹಳ್ಳಿಗಳಲ್ಲಿ ಸೊಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಇದ್ದರೆ ಕೂಡಲೆ ಸ್ಥಳೀಯ ಪಂಚಾಯತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಕೋವಿಡ್ ಹರಡದಂತೆ ಸಹಕರಿಸಬೇಕಾಗಿದೆ ಎಂದರು.
ಈ ವೇಳೆ ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ, ಪಿಎಸ್ ಐ ರಾಕೇಶ್ ಬಗಲಿ,ಮತ್ತು ಡಾಕ್ಟರ್ ವಿಶಾಲ ಹಡಪದ,ಡಾಕ್ಟರ್ ವರ್ಧಮಾನ ಬದನಿಕಾಯಿ,ಅಜೀತ ಕೊಟ್ನಿಸ್,ರಾಜಶ್ರೀ ಕೋಳಿ,ಅಶ್ವಿನಿ ಶಿಂಧೇ, ಶ್ರೀನಿವಾಸ ನಾಯಕ,ಲಕ್ಷ್ಮಣ ಮೋಳಕೆ,ಮಹೆಂದ್ರ ಕದಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');