ದೇಶನೂರನಲಿ ್ಲದಂಪತಿ ಮೇಲೆ ಹಲ್ಲೆ: ಪತಿಯನ್ನು ರಕ್ಷಿಸಲು ಬಂದ ಪತ್ನಿಗೆ ಬಿತ್ತು ಕೊಡಲಿ ಏಟು

0

ಬೈಲಹೊಂಗಲ: ತನ್ನ ಗಂಡನನ್ನು ರಕ್ಷಿಸಲು ಬಂದ ಪತ್ನಿಗೆ ಕೊಡಲಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಪೆÇೀಲಿಸ್ ಠಾಣಾ ವ್ಯಾಪ್ತಿಯ ದೇಶನೂರ ಗ್ರಾಮದಲ್ಲಿ ಜರುಗಿದೆ.
ದೇಶನೂರ ಗ್ರಾಮದ ಲಕ್ಷ್ಮೀ ನಿಂಗಪ್ಪ ಲಿಗಾಡಿ (30) ಮತ್ತು ಪತಿ ನಿಂಗಪ್ಪ ಸಿದ್ದಪ್ಪ ಲಿಗಾಡಿ ವಯಸ್ಸು (40) ಹಲ್ಲೆಯಾದವರು. ಇವರನ್ನು ಸದ್ಯ ಚಿಕಿತ್ಸೆಗಾಗಿ ಬೈಲಹೊಂಗಲದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆ ವಿವರ: ಆರೋಪಿ ಮಲ್ಲಪ್ಪ ಬಸವಂತಪ್ಪ ಕುರಬರ ಸಿಆರ್‍ಪಿಎಪ್ ಯೋಧನಾಗಿದ್ದು ರಜೆಯ ಮೇಲೆ ಬಂದಾಗಲೆಲ್ಲ ವಿಪರೀತ ಮದ್ಯ ಸೇವನೆ ಮಾಡಿ ತಮ್ಮ ಸಂಬಂಧಿಗಳಾದ ತಮ್ಮಣ್ಣ ಕುರಬರ ಜತೆ ನಿತ್ಯ ಜಗಳವಾಡುತ್ತಿದ್ದನು. ಅವರಿಗೆ ಪಿರ್ಯಾದುದಾರನಾದ ನಿಂಗಪ್ಪ ಸಿದ್ದಪ್ಪ ಲಿಗಾಡಿ ಬೆಂಬಲ ನೀಡುತ್ತಾನೆ ಎಂದು ವಿನಾಕಾರಣ ಕಳೆದ ಬುಧವಾರ ಆರೋಪಿಗಳಾದ ಮಲ್ಲಪ್ಪ ಬಸವಂತಪ್ಪ ಕುರಬರ, ಮಾರುತಿ ಭೀಮಪ್ಪ ಪೂಜೇರಿ, ಶೀಲಾ ಮಲ್ಲಪ್ಪ ಕುರುಬರ ಇವರೆಲ್ಲರೂ ಕೂಡಿಕೊಂಡು ನಿಂಗಪ್ಪನ ಮನೆಗೆ ಕೊಡಲಿ ಬಡಿಗೆ ಹಿಡಿದು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಿಂಗಪ್ಪ ನೊಂದಿಗೆ ತಂಟೆಗೆ ಬಂದು ತನ್ನ ಪತಿಯನ್ನು ರಕ್ಷಿಸಲು ಬಂದ ಲಕ್ಷ್ಮೀ ನಿಂಗಪ್ಪ ಲಿಗಾಡಿ ಅವಳ ಸೀರೆ ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಯಾದ ಮಲ್ಲಪ್ಪ ಕುರಬರ ತಾನು ಜೊತೆಗೆ ತಂದಿದ್ದ ಕೊಡಲಿಯಿಂದ ಲಕ್ಷ್ಮೀ ತಲೆಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ನೇಸರಗಿ ಪೆÇೀಲಿಸರು ಐ.ಪಿ.ಸಿ ಸೆಕ್ಷನ್ 307,323,324,504,506,34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮಲ್ಲಪ್ಪ ಬಸವಂತಪ್ಪ ಕುರಬರ (45), ಮಾರುತಿ ಭೀಮಪ್ಪ ಪೂಜೇರಿ. ಸಾ: ಯರಡಾಲ (45), ಹಾಗೂ ಶೀಲಾ ಮಲ್ಲಪ್ಪ ಕುರುಬರ (35) ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');