ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣ: 436 ಜನರಿಗೆ ಸೋಂಕು ಧೃಡ, 5 ಸಾವು

0

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಭೀತಿ ಹುಟ್ಟಿಸಿದ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು, 14 ತಾಲೂಕಿನಲ್ಲಿ ಕೊರೋನಾ ಕೆಸ್ ತೀರಾ ವಿರಳವಾಗಿದೆ.

ಹೊಸದಾಗಿ 436 ಜನರಿಗೆ ಸೋಂಕು ತಗುಲಿದೆ.  ಶುಕ್ರವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ 5 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72692ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 680 ಜನರು ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ.

ಇಂದು (ಶುಕ್ರವಾರ) 284 ಜನರು ಕೊರೊನಾದಿಂದ ಗುಣಮುಖರಾಗಿದ್ದು. ಈವರೆಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 63758ಕ್ಕೆ ಏರಿಕೆಯಾಗಿದೆ. ಇನ್ನು 8254 ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಾವಾರು ಸೋಂಕಿತರ ವಿವರ:

ಬೆಳಗಾವಿ 91,  ಅಥಣಿ 40,  ಬೈಲಹೊಂಗಲ   18, ಚಿಕ್ಕೋಡಿ 157, ಗೋಕಾಕ 11,  ಹುಕ್ಕೇರಿ 32, ಖಾನಾಪುರ 14, ರಾಮದುರ್ಗ 6,  ರಾಯಬಾಗ 49,  ಸವದತ್ತಿ 12 ಹಾಗೂ ಇತರೆ 6 ಜನರಿಗೆ ಸೋಂಕು ತಗುಲಿದೆ

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');