ಸಾಹಿತಿ,ದಲಿತಕವಿ ಸಿದ್ದಲಿಂಗಯ್ಯ ಅವರಿಗೆ ಅಶೃತರ್ಪಣ

0
ಅಥಣಿ:ಕನ್ನಡ ಸಾಹಿತ್ಯ ಲೋಕದಲ್ಲಿ ಬಂಡಾಯ ಸಾಹಿತಿಯಾಗಿ ,ಹೋರಾಟಗಾರರಾಗಿ,ಗುರುತಿಸಿಕೊಂಡಿದ್ದ ಮೇರು ಶಿಖರವೊಂದು ಇಂದು ನಮ್ಮನ್ನು ಅಗಲಿ ಆಕಾಶದ ನಕ್ಷತ್ರವಾಯಿತು ಎಂದು ಹಿರಿಯ ಪತ್ರಕರ್ತ ಸಿ ಎ ಇಟ್ನಾಳಮಠ ಹೇಳಿದರು.ದಲಿತ ಕವಿ ಸಿದ್ದಲಿಂಗಯ್ಯ ಅವರಿಗೆ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪತ್ರಕರ್ತರು, ಸಾಹಿತ್ಯ ಆಸಕ್ತರು ಮತ್ತು ಸಮಾಜದ ಮುಖಂಡರಿಂದ ಅಗಲಿದ ಸಾಹಿತಿ,ವಿಮರ್ಶಕ,ಬಂಡಾಯ ಕವಿ ಸಿದ್ದಲಿಂಗಯ್ಯ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು ಸಿದ್ದಲಿಂಗಯ್ಯ ಅವರ ಮಾತು ಮತ್ತು ಸ್ವಭಾವ ಮೃದುವಾದರೂ ಕೂಡ ಅವರ ಲೇಖನಿ ಅಷ್ಟೇ ಹರಿತವಾಗಿತ್ತು.ಹುಕ್ಕೇರಿ ಪತ್ರಕರ್ತ ಹಾಗೂ ಸಾಹಿತಿ ದೇಶಪಾಂಡೆ ಮತ್ತು ಅಥಣಿ ಸಾಹಿತಿ ವಾಮನ ಕುಲಕರ್ಣಿ ಅವರನ್ನು ಕೂಡ ಸ್ಮರಿಸಿದ ಸಿ ಎ ಇಟ್ನಾಳಮಠ ಕವಿ ಸಿದ್ದಲಿಂಗಯ್ಯ ಅವರೊಂದಿಗಿನ ಒಡನಾಟ ಮತ್ತು ಜೀವನಶೈಲಿ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಯುವ ಸಾಹಿತಿ,ಹೋರಾಟಗಾರ ಹಾಗೂ ಪತ್ರಕರ್ತ ದೀಪಕ ಶಿಂಧೇ ಮಾತನಾಡಿ ದಮನಿತರ,ದೀನರ ಮತ್ತು ದಲಿತರ ಬಗ್ಗೆ ಸಾಹಿತ್ಯ ರಚಿಸಿ,ವಿಮರ್ಶೆ,ನಾಟಕ,ಬಂಡಾಯ ಸಾಹಿತ್ಯ ಹೀಗೆ ಸಾಹಿತ್ಯ ಲೋಕದ ವಿವಿಧ ಮಗ್ಗುಲುಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಕವಿ ಸಿದ್ದಲಿಂಗಯ್ಯ ಅವರ ಆತ್ಮಕತೆ ಊರುಕೇರಿ,ಹೊಲೆಮಾದಿಗರ ಹಾಡು,ನನ್ನ ಜನಗಳು
ಮತ್ತು ಇತರೆ ಕವಿತೆಗಳು,ಅಲ್ಲೆ ಕುಂತವರೆ ಕವನ ಸಂಕಲನ ಮತ್ತು ನಾಟಕಗಳಾದ ಏಕಲವ್ಯ,ನೆಲಸಮ ಸೇರಿದಂತೆ ಹಲವು ಆಯಾಮಗಳು ಇಂದಿನ ಯುವಸಾಹಿತಿಗಳು ಓದಬೇಕಾದ ಸಿದ್ದಲಿಂಗಯ್ಯ ಅವರ ಸಾಹಿತ್ಯಗಳು ಎಂದರಲ್ಲದೆ ಸಿದ್ದಲಿಂಗಯ್ಯ ಅವರಿಗೆ ಒಲಿದು ಬಂದಿದ್ದ ಪ್ರಶಸ್ತಿ ಗಳ ಮೆಲುಕು ಹಾಕಿ ಅವರನ್ನು ರಾಜ್ಯ ಸರ್ಕಾರ ರಾಷ್ಟ್ರಕವಿ ಎಂದು ಗುರುತಿಸಿ ಗೌರವಿಸಬೇಕು ಎಂದರು.
ಈ ವೇಳೆ ಬಸವರಾಜ ಕಾಂಬಳೆ,ಸುಕುಮಾರ ಮಾದರ, ಪ್ರಶಾಂತ ಹಿರೇಮನಿ,ವಿಲಾಸ ಕಾಂಬಳೆ,ಪ್ರಕಾಶ ಕಾಂಬಳೆ,ರಮೇಶ್ ಬಾದವಾಡಗಿ,ರಾಜು ವಾಘಮಾರೆ,ರಾಕೇಶ್ ಮೈಗೂರ,ಉದಯ ಮಾಖಾಣಿ,ಪಂಡಿತ ನೂಲಿ,ಅನೀಲ ಮೋರೆ, ಸತೀಶ ಕೋಳಿ,ರಾಜು ಗಾಲಿ,ಪ್ರಶಾಂತ ಹಿರೆಮನಿ,ಯಾಶಿನ ಜಾರೆ,ಜಬ್ಬಾರ ಚಿಂಚಲಿ,ಮುರಗೆಶ ಶಿಂದಗಿ,ರಾಜು ವಾಗಮೋರೆ,ಅಪ್ಪಾಸಾಬ ಪಟ್ಟಣ,ಶಿವು ದಳವಿ,ವಿಲಾಸ ಕಾಂಬಳೆ,
ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');