ಕೊರೊನಾ ಮುಕ್ತ ಗ್ರಾಮ ಮಾಡಲು ಮುಂದಾಗಬೇಕು” ಎಂದು ವಿಧಾನ ಪರಿಷತ್‍ನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

0

ಚಿಕ್ಕೋಡಿ: “ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ವ್ಯಾಕ್ಸಿನ್ ಪಡೆದುಕೊಂಡು ಕೊರೊನಾ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸುವ ಮುಖಾಂತರ ಕೊರೊನಾ ಮುಕ್ತ ಗ್ರಾಮ ಮಾಡಲು ಮುಂದಾಗಬೇಕು” ಎಂದು ವಿಧಾನ ಪರಿಷತ್‍ನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ತಾಲೂಕಿನ ಜೈನಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳಿಗೆ ವ್ಯಾಕ್ಸಿನ್‍ಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಗ್ರಾಮ ಪಂಚಾಯತ ಸದಸ್ಯರನ್ನು ಕೊರೊನಾ ವಾರಿಯರ್ಸ ಮಾಡುವಂತೆ ಮುಖ್ಯಮಂತ್ರಿ ಹಾಗೂ ಪಂಚಾಯತ ರಾಜ್ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದನೆ ಮಾಡಿ ಅವರನ್ನು ಕೊರೊನಾ ವಾರಿಯರ್ಸ ಆಗಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ವ್ಯಾಕ್ಸಿನ್ ನೀಡುವುದಕ್ಕೆ ಒಪ್ಪಿಗೆ ಸೂಚಿಸಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.

ಶಾಸಕ ದುರ್ಯೋದನ ಐಹೊಳೆ  ಮಾತನಾಡಿ, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲಾ ಮುಂಜಾಗೃತವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಎಡಿಎಚ್ ಓ ಡಾ.ಎಸ್.ಎಸ್.ಗಡೇದ, ಟಿಎಚ್ ಓ ಡಾ.ವಿಠ್ಠಲ ಶಿಂಧೆ,ಜಿ.ಪಂ.ಮಾಜಿ ಸದಸ್ಯ ಮಹೇಶ ಭಾತೆ,ಜಿ.ಪಂ ಸದಸ್ಯೆ ಲಕ್ಷ್ಮೀ ಕುರಬರ,ಕರೋಶಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಜಯದೇ, ಗ್ರಾ.ಪಂ.ಅಧ್ಯಕ್ಷ ಸುರೇಶ ಘರಬುಡೆ, ರೌಡ ಕೆಳಗಿಮನಿ ಇನ್ನಿತರರು ಉಪಸ್ಥಿತರಿದ್ದರು.

 

ದೇವದಾಸಿ ಮಹಿಳೆಯವರಿಗೆ ಆಹಾರ ಕಿಟ್ ವಿತರಣೆ:

ಚಿಕ್ಕೋಡಿ: “ಕೊರೊನಾಕ್ಕೆ ಭಯ ಪಡಬಾರದು; ಆತ್ಮವಿಶ್ವಾದಿಂದ ಚಿಕಿತ್ಸೆ ಪಡೆದುಕೊಂಡಲ್ಲಿ ಕೊರೊನಾ ಸೋಲಿಸಲು ಸಾಧ್ಯ ವಾಗುತ್ತದೆ” ಎಂದು ಶಾಸಕ ದುರ್ಯೋದನ ಐಹೊಳೆ ಹೇಳಿದರು.

ಶನಿವಾರ ತಾಲೂಕಿನ ಕರೋಶಿ ಗ್ರಾಮದಲ್ಲಿ ದೇವದಾಸಿ ಮಹಿಳೆಯವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧರಿದ್ದೇವೆ” ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿದರು. ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಏಕನಾಥ ಜಯದೇ, ವಿಜಯ ಕೋಠಿವಾಲೆ, ರಾಯಗೌಡ ಕೆಳಗಿಮನಿ, ರವಿ ಹಿರೇಕೋಡಿ, ಬಸು ಮಾಳಗೆ, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ ಜೆ.ಕೆ. ಪಮ್ಮಾರ, ನಾಗೇಶ ಕಾಪಸಿ, ಹಣಮಂತ ಹೊಸಮನಿ, ಪಿಡಿಓ ಪ್ರವೀಣಕುಮಾರ, ಶಿವಪ್ಪ, ಗ್ರಾಮ ಪಂಚಾಯತ ಉಪಾಧ್ಯಕ್ಷ ಮಹೇಶ ಚೌಡನ್ನವರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');