ಬಡವರ ನಗುವಿನ ಶಕ್ತಿ ಸಿದ್ದಲಿಂಗಯ್ಯ :ಡಾ. ಹೊಂಬಯ್ಯ

0
  •  

    ಬೆಳಗಾವಿ : 12/06/21 : ಹುಟ್ಟಿದವರೆಲರೂತಾವು ಹೋದ ಬಳಿಕ ಚರಿತ್ರೆಯಾಗಿ ಉಳಿಯುವುದಿಲ್ಲ, ಕೆಲವು ಕಾಲದಲ್ಲಿ ಕೆಲವೇ ಜನತಾವಿರುವಾಗಲೇಚರಿತ್ರೆ ಸೃಷ್ಟಿಸುತ್ತಾರೆ, ಮರಣದ ಬಳಿಕ ಚರಿತ್ರೆಯಾಗಿ ಉಳಿಯುತ್ತಾರೆ. ಹೀಗೆ ಚರಿತ್ರೆಯಾದವರಲ್ಲಿ ನಮ್ಮಕಾಲದ ಬಂಡಾಯ ಕವಿ ಡಾ.ಸಿದ್ದಲಿಂಗಯ್ಯ ಪ್ರಮುಖರು.1970ರ ದಶಕದಲ್ಲಿ ಬಿ.ಬಸವಲಿಂಗಪ್ಪನವರ ಬೂಸಾ ಚಳುವಳಿಯಲ್ಲಿ ಹೋರಾಟಗಾರರಾಗಿರೂಪುಗೊಂಡ ಸಿದ್ದಲಿಂಗಯ್ಯ ಅವರು ಬಡತನವನ್ನೇ ಹೋರಾಟದ ಶಕ್ತಿಯನ್ನಾಗಿಸಿ, ಬಡವರ ನಗುವಿನ ಶಕ್ತಿಯಾಗಿ ಗುರುತಿಸಿಕೊಂಡರು ಎಂದು ಬಂಡಾಯ ಸಾಹಿತಿಡಾ. ಹೊಂಬಯ್ಯ ಹೊನ್ನಲಗೆರೆ ಹೇಳಿದರು. ಅವರಿಂದು ಬೆಳಗಾವಿ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಬಂಡಾಯ ಸಾಹಿತ್ಯ ವಿದ್ಯಾರ್ಥಿಘಟಕ ಇವುಗಳ ಸಂಯುಕ್ತಆಶ್ರಯದಲ್ಲಿ ‘ಕ್ರಾಂತಿ ಪದಗಳ ಕವಿ ಸಿದ್ದಲಿಂಗಯ್ಯ ಅವರಿಗೆ ನುಡಿ ನಮನ’ದಜೂಮ್ ಮೀಟಿಂಗ್‍ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತ ಚಳುವಳಿಯಲ್ಲಿ ಭಾಗವಹಿಸುತ್ತಲೇ ಸಿದ್ದಲಿಂಗಯ್ಯ ಅವರು 1975ರಲ್ಲಿ ಹೊಲೆಮಾದಿಗರ ಹಾಡು ಕವನ ಸಂಕಲನ ಪ್ರಕಟಿಸಿದರು. ಬರೆಯುತ್ತಲೇ ಹೋರಾಟದಲ್ಲಿ ಭಾಗವಹಿಸುತ್ತ, ಹೋರಾಡುತ್ತಲೇ ಬರೆದ ಈ ಸಂಕಲನ ದಲಿತ ಲೋಕವನ್ನು ಪ್ರತಿನಿಧಿಸುವ ಪ್ರಖರಧ್ವನಿಯಾಗಿ ಮೂಡಿ ಬಂತು.ಅದಕ್ಕಾಗಿಯೇಅವರನ್ನುಕ್ರಾಂತಿ ಪದಗಳ ಕವಿ ಕರೆಯಲಾಗುತ್ತಿದೆಎಂದರು.

    ನುಡಿ ನಮನ ಸಲ್ಲಿಸಿದ ಡಾ.ಅಶೋಕ ಡಿಸೋಜಾಅವರುಎಪ್ಪತ್ತರದಶಕದಲ್ಲಿದ್ದದಲಿತರ ಮೇಲಿನ ಜಾತೀಯತೆ, ಬಡವರ ಹಸಿವು, ದುಡಿಯುವ ಜನಗಳ ಮೇಲಿನ ಹಲ್ಲೆ ದೌರ್ಜನ್ಯಗಳು ಇಂದುಕೋಮುವಾದಖಾಸಗೀಕರಣದ ಬೇರೆ ಬೇರೆ ರೂಪಗಳಲ್ಲಿ ಭೀಕರವಾಗಿ ದಾಳಿಮಾಡುತ್ತಿವೆ. ನ್ಯಾಯ ಕೇಳುವುದೇ ಅಪರಾಧವಾಗಿದೆ. ಈ ಸಂದರ್ಭದಲ್ಲಿ ಕವಿ ಸಿದ್ದಲಿಂಗಯ್ಯನವರ ಕೆಲವು ಬರಹಗಳನ್ನು ಬಳಸಿಕೊಂಡು ಹಕ್ಕೊತ್ತಾಯದರೀತಿ, ತಮಿಳುನಾಡಿನ ಪೆರಿಯಾರ್ ಮಾದರಿಯಲ್ಲಿ ಬಂಡಾಯ ಹೂಡಬೇಕಾಗಿದೆ ಮತ್ತು ನ್ಯಾಯ ಕೇಳಬೇಕಾಗಿದೆ, ಇದೇಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ನುಡಿದರು. ಸಂಶೋಧಕಡಾ.ಎಸ್‍ಎಸ್‍ಅಂಗಡಿ, ಸಾಹಿತಿಗಳಾದ ಡಾ.ಸುಬ್ಬರಾವ್‍ಎಂಟೆತ್ತಿನವರ, ಡಾ. ಪಿ. ನಾಗರಾಜ್, ಸಿದ್ರಾಮ್ ತಳವಾರ, ರಾಜು ಸನದಿ, ಸಂತೋಷ ನಾಯಕ, ಅಕ್ಷತಾ ಯಳ್ಳೂರ ಮುಂತಾದವರು ನುಡಿನಮನ ಸಲ್ಲಿಸಿದರು.

    ಜಿಲ್ಲೆಯ ವಿವಿಧ ವಲಯಗಳ ಪ್ರಮುಖರಾದ ಮಾನವ ಬಂಧುತ್ವ ವೇದಿಕೆಯರವೀಂದ್ರ ನಾಯ್ಕರ್, ಕಮ್ಯುನಿಸ್ಟ್ ಚಳುವಳಿಯ ಜಿ. ವಿ.ಕುಲಕರ್ಣಿ, ಎಲ್‍ಎಸ್ ನಾಯಕ, ಎಸ್ ಕೆ ಕುಲಕರ್ಣಿ ಬಂಡಾಯ ಸಂಘಟನೆಯಜಿಲ್ಲಾ ಸಂಚಾಲಕರಾದಡಾ. ಅಡಿವೆಪ್ಪಇಟಗಿ, ಸುಧಾಕೊಟಬಾಗಿ, ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಮಂಜುನಾಥ ಪಾಟೀಲ, ಬಾಲಕೃಷ್ಣ ನಾಯಕ, ಸಚಿನ್ ಮಾಳಗೆ, ತೇಜಸ್ವಿನಿ ಲೋಕುರೆ.ಸಾಹಿತಿಗಳಾದ ಡಾ.ಚಂದ್ರು ತಳವಾರ್, ಡಾ.ಕವಿತಾಕುಸಗಲ್ಲ, ಹಾಲಪ್ಪ ಪರೀಟ, ಶಿವರಾಜ್ ಕಾಂಬಳೆ, ಸಂಜೀವ ತಳವಾರ್, ವಿಲಾಸ ಕಾಂಬಳೆ, ಸಂಜೀವ ಕಿವಡಗೋಳ, ಸಿದ್ಧಾರ್ಥನ್ ಚಿದಂಬರಮ್ ಮುಂತಾದವರು ಭಾಗವಹಿಸಿದ್ದರು.

    ಪ್ರಾರಂಭದಲ್ಲಿ ಕವಿ ನದೀಮ್ ಸನದಿ ಸ್ವಾಗತಿಸಿದರು, ಬಂಡಾಯ ಸಾಹಿತಿಡಾ.ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕ ಮಾತನಾಡಿದರು, ಕಾವೇರಿ ಬುಕ್ಯಾಳಕರ ಕ್ರಾಂತಿಗೀತೆ ಹಾಡಿದರು. ಮಹೇಶ್ ಸಿಂಗೆ ವಂದಿಸಿದರು, ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದಕಾರ್ಯಕ್ರಮ ನಿರ್ವಹಿಸಿದರು.ಆತೀಶ್‍ಢಾಲೆಅವರುತಾಂತ್ರಿಕ ನಿರ್ವಹಣೆ ಮಾಡಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');