ಬೆಳಗಾವಿಯಲ್ಲಿ ಇಂದು 266 ಜನರಿಗೆ ಕೊರೊನಾ; 9 ಸೋಂಕಿತರ ಸಾವು

0

ಬೆಳಗಾವಿ: ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಇಂದು (ಭಾನುವಾರ) 9 ಜನರು ಮೃತಪಟ್ಟಿದ್ದು, 266 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

ಮೃತಪಟ್ಟವರ ಮಾಹಿತಿ: 

ಬೆಳಗಾವಿ ತಾಲೂಕಿನ ಮೂವರು, ಚಿಕ್ಕೋಡಿ, ಗೋಕಾಕನ ತಲಾ ಇಬ್ಬರು ಹಾಗೂ ಬೈಲಹೊಂಗಲ, ರಾಯಬಾಗ ತಾಲೂಕಿನ ತಲಾ ಓರ್ವ ಸೋಂಕಿತರು ಜಿಲ್ಲೆಯ ವಿವಿಧೆಡೆ ಇಂದು  ಮೃತಪಟ್ಟಿದ್ದಾರೆ.

ತಾಲೂಕಾವಾರು ಸೋಂಕಿತರ ವಿವರ:

ಬೆಳಗಾವಿ 72, ಅಥಣಿ 12, ಬೈಲಹೊಂಗಲ 12, ಚಿಕ್ಕೋಡಿ 55, ಗೋಕಾಕ 29, ಹುಕ್ಕೇರಿ 14, ಖಾನಾಪುರ 12, ರಾಮದುರ್ಗ 8, ರಾಯಬಾಗ 38, ಸವದತ್ತಿ 11 ಹಾಗೂ ಇತರೆ ಮೂವರಿಗೆ ಇಂದು ಸೋಂಕು ತಗುಲಿದೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 73,401 ಕ್ಕೆ ತಲುಪಿದೆ. 66,900 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. 699 ಸೋಂಕಿತರು ಮೃತಪಟ್ಟಿದ್ದಾರೆ. 5802 ಸೋಂಕಿತರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');