ಚಿಕ್ಕೋಡಿಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಚಾಲನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ

0

ಚಿಕ್ಕೋಡಿ: ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಭಾನುವಾರ ತಾಲೂಕಿನ ನಾಯಿಂಗ್ಲಜ ಬಳಿ ಇರುವ ಮೇಗ್ನಟಫ್ ಸಭಾಭವನದಲ್ಲಿ ಶ್ರೀ ಬಿರೇಶ್ವರ ಕೋ ಕ್ರೆಡಿಟ್ ಸೊಸಾಯಿಟಿ ವತಿಯಿಂದ  ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇಂತಹ ಸಂದಿಗ್ಧ ಪರಸ್ಥಿತಿ ಎದುರಾಗಬಾರದು ಎಂಬುದನ್ನು ಮನಗಂಡು ಇಲ್ಲಿ ಆಕ್ಸಿಜನ್ ಪ್ಲಾಂಟ್ ಮಾಡಲಾಗಿದೆ” ಎಂದರು.

“ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಾಕಾಗುಷ್ಟು ಆಕ್ಸಿಜನ್ ಪ್ಲಾಂಟ್ ನ್ನು ನಿಪ್ಪಾಣಿಯಿಂದ ಸರಬರಾಜ ಮಾಡಲಾಗಿದೆ. ಜಿಲ್ಲಾಧಿಕಾರಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ಅವರು ಕೋವಿಡದಲ್ಲಿ ಮಾಡಿರುವ ಕಾರ್ಯ ಶ್ಲಾಘನೀಯ”  ಎಂದು ಹೇಳಿದರು.

ಸಂಸದ ಅಣ್ಣಸಾಹೇಬ ಜೊಲ್ಲೆ ಮಾತನಾಡಿ, “ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬಳಕೆಯಾಗುತ್ತಿತ್ತು.ಇದೀಗ ಕೊರೊನಾದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವರಿಗೆ ಇಲ್ಲಿನ ಆಕ್ಸಿಜನ ಘಟಕವನ್ನು ಮುಂಜಾಗೃತಾ  ಕ್ರಮವಾಗಿ ಇಲ್ಲಿ ಸ್ಥಾಪನೆ ಮಾಡಲಾಗುತ್ತಿದೆ” ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಜಿ. ಹಿರೇಮಠ ಮಾತನಾಡಿ, “ಜೊಲ್ಲೆ ಉದ್ಯೋಗ ಸಮೂಹ ಕೋವಿಡ ಕೇರ್ ಸೆಂಟರ ಮಾಡಿದ್ದರಿಂದ ಜನರಿಗೆ ಸಹಕಾರಿಯಾಗಿದೆ” ಎಂದು ಹೇಳಿದರು.

ಡಿವೈಎಸ್ಪಿ ಮನೋಜ ನಾಯಿಕ, ಬಸವ  ಫೌಂಡೇಷನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಜಯನಾಂದ ಜಾಧವ, ಗೋಪಾಲ ನಾಯಿಕ, ನಿಪ್ಪಾಣಿ ಪುರಸಭೆ ಅಧ್ಯಕ್ಷ ಜಯವಂತ ಬಾಟಲೆ, ಎಡಿಎಚ್ ಓ ಡಾ.ಎಸ್.ಎಸ್.ಗಡೇದ ಮಾತನಾಡಿದರು.

ಸಕ್ಕರೆ ಮಹಾಮಂಡಳ  ಅಧ್ಯಕ್ಷ ವಿಶ್ವನಾಥ ಕಮತೆ, ಹಾಲಸಿದ್ದನಾಥ ಸಕ್ಕರೆ ಕಾರಖಾನೆ ನಿರ್ದೇಶಕ ಅಪ್ಪಾಸಾಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಸಿಪಿಐ ಸಂಗಮೇಶ ಶಿವಯೋಗಿ, ತಹಶೀಲ್ದಾರ ಪ್ರವೀನ ಜೈನ, ಟಿಎಚ್ ಓ ಡಾ.ವಿಠ್ಠಲ ಶಿಂಧೆ, ಸಿದ್ರಾಮ ಗಡದೆ ಮುಂತಾದವರು ಉಪಸ್ಥಿತರಿದ್ದರು. ಹಾಲಪ್ಪಾ ಮಾದಪ್ಪಗೋಳ ಸ್ವಾಗತಿಸಿದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');