ಮಣ್ಣು ದಂಧೆಗೆ ಕಡಿವಾಣ ಯಾವಾಗ ?

0
ಕಣ್ಣು ಮುಚ್ಚಿ ಕುಳಿತ ಕಾಗವಾಡ ಅಧಿಕಾರಿಗಳು ಹಾಗೂ ಭೂ ಇಲಾಖೆ ಆಡಳಿತ ಸಿಬ್ಬಂದಿಗಳ ನಿರ್ಲಕ್ಷ್ಯ ದಿಂದಾಗಿ ಹಗಲು ರಾತ್ರಿ ಎನ್ನದೆ ನದಿ ತೀರದಲ್ಲಿ ಇರುವ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ಅಗೆದು ದುಬಾರಿ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆಯುತ್ತಿದೆ.
ಕೊವಿಡ್ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಕಾರ್ಯನಿರ್ವಹಣೆ ಯಲ್ಲಿ ತೂಡಗಿದ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಕೆಲವು ಕಿಡಿಗೇಡಿಗಳು ಜೆಸಿಬಿ ಹಿಟಾಚಿಗಳ ಮೂಲಕ ಮಣ್ಣು ಅಗೆದು ಲಾರಿ‌ ಹಾಗೂ ಟ್ಯಾಕ್ಟರ್‌ ಮೂಲಕ ಸರಬರಾಜು ಮಾಡುತ್ತಿದ್ದು ಈ ದೃಶ್ಯಾವಳಿಗಳು ಪಟ್ಟಣ ಪಂಚಾಯತಿಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು‌ ಈಗಾ  ಅಧಿಕಾರಿಗಳ ವಿರುದ್ಧ ಹಲವು ಜನರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಂತಹ ಮಣ್ಣು ಮಾಫೀಯಾ ದಂದೆಕೊರರಿಂದಾಗಿ ನದಿ ಪಾತ್ರ ಬರಿದಾಗುತ್ತಿದ್ದು ಮಳೆಗಾಲದಲ್ಲಿ ತುಂಬಿ ಹರಿಯುವ ಕೃಷ್ಣಾ ನದಿಯ ನೀರು ನದಿಪಾತ್ರ ದಾಟಿ ಹೊರಬಂದು ಗ್ರಾಮದಲ್ಲಿ ಜಾಲವೃತ ಸ್ಥಿತಿ ನಿರ್ಮಾಣವಾಗುತ್ತಿದೆ.ಅನಧಿಕೃತವಾಗಿ ಬೇಕಾಬಿಟ್ಟಿಯಾಗಿ ಮಣ್ಣು ಅಗೆಯುತ್ತಿರುವ ದಂಧೆಕೊರರನ್ನು ಬಂಧಿಸಿ ವಾಹನಗಳನ್ನು ಜಪ್ತೀ ಮಾಡಿ ದಂಡ ವಿಧಿಸಬೇಕೆಂದು ಸಮಾಜ ಸೇವಕರು  ಒತ್ತಾಯಿಸಿದ್ದಾರೆ,
ಹಗಲು ರಾತ್ರಿ ಸಂಚರಿಸುವ ಟ್ಯಾಕ್ಟರ್ ಮತ್ತು ಟಿಪ್ಪರ್ ಹಾಗೂ ಲಾರಿಗಳ ಸಪ್ಪಳಕ್ಕೆ ಜನ ಸಾಮಾನ್ಯರಿಗೆ ನಿದ್ದೆ ಬಾರದೆ  ಅಧಿಕಾರಿಗಳ‌ ವಿರುದ್ಧ ಹಾಗೂ ಮಣ್ಣು ಮಾಫಿಯಾ ವಿರುದ್ದ ಜನರು ಹಿಡಿಶಾಪ ಹಾಕುತ್ತಿದ್ದಾರೆ.ಹಲವು ಕಡೆ ರಾಜಕಾರಣಿಗಳು ಇಂತಹ ಅಕ್ರಮಗಳಿಗೆ ಬೆಂಬಲ ನೀಡುತ್ತಿರುವದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.
ಜನರು ಇಂತಹ ಅಕ್ರಮಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತಿ ಅಧಿಕಾರಿಗಳು ಹಣ ಪಡೆದು ಮೌನ ವಹಿಸುತ್ತಾರೆ ಎಂದು ಗಂಭೀರ ಆರೋಪಗಳನ್ನು ಮಾಡುತ್ತಿದ್ದು ಇನ್ನಾದರೂ ಎಚ್ಚೆತುಕೊಂಡು ಸಂಭಂದಿಸಿದ ಇಲಾಖೆ ‌ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳುತ್ತಾರಾ? ಅಥವಾ ಇವರಿಗೆ  ನೀಡುತ್ತಾರಾ ಅಂತ ಕಾಯ್ದು ನೋಡಬೇಕು.
ಅಕ್ರಮವಾಗಿ ಮಣ್ಣು ಅಗೆಯುತ್ತಿರುವ ಮಾಹಿತಿ ಬಂದ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೆವೆ.ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಅಂದಾಜು ಮಾಡುವ ದಂಡವನ್ನು ಸಂಭಂದಪಟ್ಟ ರೈತರ ಜಮೀನುಗಳ ಮೇಲೆ ಭೋಜಾ ಎರಿಸಲು ಕ್ರಮಕ್ಕೆ ಶಿಪಾರಸ್ಸು ಮಾಡುತ್ತೆವೆ.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');