ಬಾಕಿ ಬಿಲ್ ಪಾವತಿಸದ್ದಕ್ಕೆ ನಿವೃತ್ತ ಯೋಧನ ಶವ ನೀಡದ ಬಿಜೆಪಿ ಮುಖಂಡನ ಒಡೆತನದ ಬೆಳಗಾವಿಯ ಖಾಸಗಿ ಆಸ್ಪತ್ರೆ

0

ಬೆಳಗಾವಿ: ಬಾಕಿ ಬಿಲ್ ಪಾವತಿಸದ್ದಕ್ಕೆ ಕೋವಿಡ್ ನಿಂದ ಮೃತಪಟ್ಟ ನಿವೃತ್ತ ಯೋಧನ ಶವ ನೀಡದೇ, ಬಿಜೆಪಿ ಮುಖಂಡನ ಒಡೆತನದ ನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಪ್ರದರ್ಶಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಮೃತದೇಹ ನೀಡದ ಇದ್ದಿದ್ದರಿಂದ ಮೃತದೇಹ ಪಡೆಯಲು ಯೋಧನ ಕುಟುಂಬಸ್ಥರು ಪರದಾಡುವಂತಾಗಿದೆ. “ಈಗ ಮೃತದೇಹ ಕೊಡಿ, ಅಂತ್ಯಸಂಸ್ಕಾರದ ನಂತರ ನಿಮ್ಮ ಹಣ ಪಾವತಿಸುತ್ತೇವೆ ಎಂದು ಬೇಡಿಕೊಂಡರು ಕೂಡ ಆಸ್ಪತ್ರೆಯ ಆಡಳಿತ ಮಂಡಳಿ ಮೃತದೇಹವನ್ನು ನೀಡುತ್ತಿಲ್ಲ” ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯೇ ಎದುರು ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರು “ಭಾರತ ಮಾತಾ ಕೀ ಜೈ” ಎಂದು ಘೋಷಣೆ ಕೂಗಿದರು. ಆಸ್ಪತ್ರೆಯ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

23 ದಿನಗಳಿಂದ ಚಿಕಿತ್ಸೆ:

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ನಿವೃತ್ತ ಯೋಧ ರಾಜೇಂದ್ರ ಮೆಣಸೆ ಮೃತಪಟ್ಟವರಾಗಿದ್ದಾರೆ. ಕಳೆದ 23 ದಿನಗಳ ಹಿಂದೆಯೇ ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಯಾವ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ.

“ರಾಜೇಂದ್ರ ಅವರು ನಿನ್ನೆ ರಾತ್ರಿ 2 ಗಂಟೆಗೆ ಮೃತಪಟ್ಟಿದ್ದಾರೆ. ಆದರೆ, ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ನಮಗೆ ಬೆಳಿಗ್ಗೆ 10 ಗಂಟೆಗೆ ತಿಳಿಸಿದ್ದಾರೆ. ಈಗಾಗಲೇ 3,10,000 ರೂ. ಹಣ ಪಾವತಿಸಿದರೂ ಕೂಡ, ಮತ್ತೆ 3,63,000 ಹಣ ಪಾವತಿಸುವಂತೆ ಆಸ್ಪತ್ರೆಯವರು ಹೇಳುತ್ತಿದ್ದಾರೆ” ಎಂದು ಕುಟುಂಬಸ್ಥರು ಆರೋಪಿಸಿದರು.

“ದುಡ್ಡು ಕೊಟ್ಟರೇ ಮಾತ್ರ ಮೃತದೇಹ ಕೊಡುತ್ತೇವೆ ಎಂದು ಆಸ್ಪತ್ರೆಯವರು ಸತಾಯಿಸುತ್ತಿದ್ದಾರೆ. ನಿವೃತ್ತ ಯೋಧನ ಪರಿಸ್ಥಿತಿಯೇ ಹೀಗಾದರೇ, ಜನಸಾಮಾನ್ಯರ ಗತಿಯೇನು? ಶವ ನೀಡಲು ಸತಾಯಿಸಬಾರದು ಎಂದು ಸರ್ಕಾರ ನಿರ್ದೇಶನ ನೀಡಿದ್ದರು ಕೂಡ ಆಸ್ಪತ್ರೆಯವರು ಸರ್ಕಾರದ ನಿಯಮವನ್ನೂ ಪಾಲಿಸುತ್ತಿಲ್ಲ” ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. /////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');