ಬೆಳಗಾವಿಯಲ್ಲಿ 5 ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಗಳು ಕಂಡುಬಂದ ಗ್ರಾಮಗಳ ಸೀಲ್‍ಡೌನ್; ಜಿಲ್ಲಾಧಿಕಾರಿ ಹಿರೇಮಠ

0

ಚಿಕ್ಕೋಡಿ: “ಇನ್ನು ಮುಂದೆ 5ಕಿಂತ ಹೆಚ್ಚು ಕೋವಿಡ್ ಪಾಸಿಟಿವ್  ಪ್ರಕರಣಗಳು ಕಂಡುಬಂದಲ್ಲಿ ಆ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಪಟ್ಟಣದಲ್ಲಿ ಹೆಚ್ಚು ಕೊರೊನಾ ಸೊಂಕಿತರು ಕಂಡು ಬಂದಿರುವ  ರಾಜೀವ ನಗರದಲ್ಲಿರುವ ಕೊರೊನಾ ಸೊಂಕಿತರ ಮನೆಗಳಿಗೆ ಭಾನುವಾರ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ಪಾಸಿಟಿವಿಟಿ ರೇಟ್ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರ ಸಹಕಾರಿ ಮುಖ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮುಖಾಂತರ ಕೊರೊನಾ ಹೋಗಲಾಡಿಸಲು ಮುಂದಾಗಬೇಕು” ಎಂದು ಹೇಳಿದರು.

ವಾರದಲ್ಲಿಯೇ ಕೊರೊನಾ ಪ್ರಯೋಗಾಲಯ:
“ಚಿಕ್ಕೋಡಿಯಲ್ಲಿ ಒಂದು ವಾರದಲ್ಲಿಯೇ ಕೊರೊನಾ ಪರೀಕ್ಷಾ ಪ್ರಯೋಗಾಲಯ ಪ್ರಾರಂಭಿಸಲಾಗುವುದು. ಇದರಿಂದ  ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಕಾಗವಾಡ ಹಾಗೂ ಅಥಣಿ ತಾಲೂಕಿನ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ” ಎಂದರು.

ಜಿಲ್ಲಾಧಿಕಾರಿಗಳು ಕೊರೊನಾ ಸೋಂಕಿತರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ಸೋಂಕಿತರು ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

“ಕೊರೊನಾ ಸೊಂಕಿತರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ದೈರ್ಯದಿಂದ ಇರಬೇಕು. ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡು ಬಂದಲ್ಲಿ ತಕ್ಷಣ ತಮ್ಮ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿಕೊಳ್ಳಬೇಕು. ಸರ್ಕಾರದಿಂದ ಕೊಟ್ಟಿರುವ ಆರೋಗ್ಯ ಕಿಟ್ ಬಳಕೆ ಮಾಡಿಕೊಳ್ಳಬೇಕು” ಎಂದು ಹೇಳಿದರು.

ಎಡಿಎಚ್ ಓ ಡಾ.ಎಸ್.ಎಸ್. ಗಡೇದ, ತಹಶೀಲ್ದಾರ ಪ್ರವೀನ ಜೈನ, ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ರೋಗಿ,
ಟಿಎಚ್ ಓ ಡಾ.ವಿಠ್ಠಲ ಶಿಂಧೆ ಉಪಸ್ಥಿತರಿದ್ದರು./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');