ಪೊಲೀಸ್ ಠಾಣೆ ಮುಂದೆಯೇ ನಿಲ್ಲಿಸಿದ್ದ ಇಲಾಖೆಯ ಬೈಕ್ ಕಳ್ಳತನ

0

ಬೆಂಗಳೂರು : ಸಾಮಾನ್ಯವಾಗಿ ರಸ್ತೆಯಲ್ಲಿ, ಮನೆ ಬಾಗಿಲು ಮುಂದೆ ಇಟ್ಟಿರುವ ಬೈಕ್ ಕಳ್ಳತನವಾಗಿರುವುದು ಕೇಳಿರ್ತಿರಾ, ಆದ್ರೆ ಪೊಲೀಸ ಠಾಣೆ ಮುಂದಿಟ್ಟಿದ್ದ ದ್ವಿಚಕ್ರ ವಾಹನ ಮಾಯವಾಗಿದೆ.

ಬೆಂಗಳೂರು ದಂಡು ರೈಲ್ವೆ ಪೊಲೀಸ್ ಠಾಣೆಯ ಮುಂದೆಯೇ ನಿಲ್ಲಿಸಿದ್ದ KA – 03 – G – 0520 ನಂಬರ್‌ನ ಹೀರೋ ಹೋಂಡಾ ಬೈಕ್ ಕಳ್ಳತನವಾಗಿದೆ ಎಂದು ಪಿಎಸ್ ಐ ಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ಪೊಲೀಸ್ ಠಾಣೆಯಲ್ಲಿ ಪೊಲೀಸ್ ಬೈಕಿಗೆ ಸೆಫ್ಟಿ ಇಲ್ವಾ ಎನ್ನುವ ಪ್ರಶ್ನೆ ಉದ್ಭವವಾಗಿದೆ . ಠಾಣೆಯ ಆವರಣದಲ್ಲಿ ಬೈಕ್‌ನ್ನ ಪಾರ್ಕ್ ಮಾಡಲಾಗಿತ್ತು . ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ , ಸಿಬ್ಬಂದಿ ಎಲ್ಲರೂ ಇದ್ದರು. ಆದ್ರೆ ಬೈಕ್ ಮಾತ್ರ ಇರಲಿಲ್ಲ ಎನ್ನಲಾಗಿದೆ .

ಈ ಕುರಿತು ಹೇಳಿಕೆ ನೀಡಿರುವ ರೈಲ್ವೆ ಎಸ್‌ಪಿ ಸಿರಿ ಗೌರಿ, 15 ವರ್ಷದ ಹಿಂದಿನ ಬೈಕ್ ಒಂದನ್ನು ಕಳ್ಳತನ ಮಾಡಿದ್ದಾರೆ. ಲಾಕ್ ಡೌನ್ ಇರೋ ಕಾರಣ ಮಿಸ್ ಯೂಸ್ ಮಾಡುವ ಉದ್ದೇಶದಿಂದ ಕದ್ದಿರುವ ಅನುಮಾನವಿದೆ. ತನಿಖೆ ನಡೀತಿದೆ . ಅದಷ್ಟ ಬೇಗ ಬೈಕ್ ಅನ್ನ ಪತ್ತೆ ಮಾಡಲಾಗುವುದು ಎಂದಿದ್ದಾರೆ .//

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');