ಕುಡಚಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

0

ಕುಡಚಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಸಂಜೆ ಕುಡಚಿ ಸರ್ಕಾರಿ ಆಸ್ಪತ್ರೆಗೆ ಇಂದು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಆಸ್ಪತ್ರೆಗಳಲ್ಲಿ ಏನು ಸಮಸ್ಯೆಯಿದೆ? ಈಗಿನವರೆಗೆ ಕೋವಿಡ್ ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಲಾಗಿದೆ? ಎಂಬುದರ ಕುರಿತು ಹಾಗೂ ಆಸ್ಪತ್ರೆಗಳಲ್ಲಿನ ಮೂಲಭೂತ ಸಮಸ್ಯೆ ಮತ್ತು ಅವಶ್ಯಕತೆಗಳ ಬಗ್ಗೆ ಅವರು ಮಾಹಿತಿ ಪಡೆದರು.

ಎಡಿಎಚ್ಓ ಡಾ.ಎಸ್.ಎಸ್. ಗಡೇದ, ಟಿಎಚ್ಓ ಡಾ.ಎಸ್.ಎಸ್. ಬಾಮೆ, ಡಾ. ಸತೀಶ ಕೆ., ಬಿ.ಎ. ಕುಂಬಾರ ಸೇರಿ ಇನ್ನಿತರರು ಇದ್ದರು.

ಆಹಾರ ಕಿಟ್ ವಿತರಣೆ:

ಆಸ್ಪತ್ರೆ ಭೇಟಿ ನಂತರ, ಪಟ್ಟಣದಲ್ಲಿ ಸ್ಥಳೀಯ ಮುಖಂಡ ಅಮಿತ ಘಾಟಗೆ ಅವರ ವತಿಯಿಂದ ಸತೀಶ ಜಾರಕಿಹೊಳಿ ಅವರು ಬಡ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ನೂರಾರು ಬಡ ಜನರಿಗೆ ಆಹಾರ ಕಿಟ್ ವಿತರಿಸಲಾಯಿತು.

ಕುಡಚಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣ್ಣ ಸರವ, ಮುಖಂಡರಾದ ಅಮಿತ ಘಾಟಗೆ, ಇನಾಮುದ್ದಿನ್ ಸಜ್ಜನ್, ಮಹೇಶ ತಮ್ಮಣ್ಣವರ, ಯಲ್ಲಪ್ಪ ಶಿಂಗೆ, ಸಿದ್ದಿಕಿ ಅಂಕಲಗಿ, ಸತ್ತರ ಮುಲ್ಲಾ, ಅಬ್ಬಾಸ ಮುಲ್ಲಾ, ಸಮೀವುಲ್ಲಾ ದೇಸಾಯಿ, ರಾಜು ಕುರಿ ಸೇರಿ ಇನ್ನಿತರರು ಇದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');