ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

0

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಅಥಣಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಪೆಟ್ರೋಲಿಯಂ ದರ ಇಳಿಕೆ ಇದ್ದರೂ ಕೇಂದ್ರ ಸರ್ಕಾರ ಇಂಧನ ದರ ಇಳಿಸದೆ ದೇಶದ ನಾಗರೀಕರು ಪರದಾಡುವಂತೆ ಮಾಡಿದ್ದಾರೆ.ಇದಕ್ಕೆ ದೇಶದ ಆಡಳಿತ ನಡೆಸುವಲ್ಲಿ ಬಿಜೆಪಿ ಸರ್ಕಾರ ವಿಫಲಗೊಂಡಿದೆ.ಎಂದು ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ  ಏಕಕಾಲಕ್ಕೆ ಹನ್ನೊಂದು ಪೆಟ್ರೋಲ್ ಬಂಕ್ ಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮೋದಿ ಹಠಾವೋ ದೇಶ ಬಚಾವೋ, ಮೋದಿ ತುಮ್ನೆ ಕ್ಯಾ ಕಿಯಾ ದೇಶ ಕೊ ಬರಬಾದ ಕಿಯಾ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.ಅಥಣಿ ಪಟ್ಟಣದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಕಾಂಗ್ರೆಸ್ ಎಸ್ ಸಿ ಎಸ್ ಟಿ ಘಟಕ,ಕಾಂಗ್ರೆಸ್ ಯುವ ಘಟಕ, ಮಹಿಳಾ ಘಟಕ, ಓಬಿಸಿ ಘಟಕ, ಸೇರಿದಂತೆ ಅಥಣಿ ಮತ್ತು ತೆಲಸಂಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪೆಟ್ರೋಲ್ ಬೆಲೆ ಇಂದು ನೂರು ರೂಪಾಯಿ ದಾಟುತ್ತಿದ್ದು ಬಡವರು,ರೈತರು, ಮತ್ತು ದುಡಿಯುವ ವರ್ಗಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಆದ್ದರಿಂದ ಮೋದಿ ಹಠಾವೋ ದೇಶ ಬಚಾವೋ ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆ ಈ ಹಿಂದೆ ಪೆಟ್ರೋಲ್ ದರ ಎಪ್ಪತ್ತು ರೂಪಾಯಿ ತಲುಪಿದಾಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರಿಗೆ ಸ್ಮೃತಿ ಇರಾಣಿ ಅವರು ಬಳೆಗಳನ್ನು ಕಳಿಸಿ ಪ್ರತಿಭಟನೆ ಮಾಡಿದ್ದರು ಈಗ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮೋದಿ ಪ್ರಧಾನಿಯಾಗಿದ್ದು ಪೆಟ್ರೋಲ್ ದರ ನೂರು ರೂಪಾಯಿ ದಾಟುತ್ತಿದೆ.ಈಗ ಸ್ಮೃತಿ ಇರಾಣಿ ಎಷ್ಟು ಬಳೆಗಳನ್ನು ಕಳಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾಧ್ಯಮಗಳ ಮೂಲಕ ಪ್ರಶ್ನೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅನೀಲ ಸುಣಧೋಳಿ ಮಾತನಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಪೆಟ್ರೋಲ್ ಡಿಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೆಚ್ಚುಸತ್ತಲೆ ಇದೆ. ಜನಸಾಮಾನ್ಯರ ಘೋಳು ಹೇಳತೀರದಂತಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರ ಅರವತ್ತು ರೂಪಾಯಿ ಇರುವ ಪೆಟ್ರೋಲ್ ದರಕ್ಕೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರಿಗೆ ಹೊರೆಯನ್ನು ಉಂಟು ಮಾಡುತ್ತಿರುವದರಿಂದ ಸರ್ಕಾರಗಳ ವೈಪಲ್ಯ ಎದ್ದು ಕಾಣುತ್ತಿದೆ.
ಆದ್ದರಿಂದ ಕಾಂಗ್ರೆಸ್ ಪಕ್ಷ ನಿತ್ಯ ಬಳಕೆಯ ವಸ್ತುಗಳಾದ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ದರೆಪ್ಪ ಠಕ್ಕಣ್ಣವರ, ಸಂತ್ಯಪ್ಪಾ ಬಾಗೆನ್ನವರ, ಅಸ್ಲಮ್ ನಾಲಬಂದ, ಬಾಬು ಖೆಮಲಾಪೂರ, ಗುಲಾಬ ನಾಲಬಂದ, ವಿಲೀನರಾಜ ಯಳಮಲ್ಲೆ, ರಾಜು ಜಮಖಂಡಿಕರ, ಸೈಯದ ಅಮೀನ ಗದ್ಯಾಳ, ಶಿವು ಗುಡ್ಡಾಪುರ, ಮಂಜು ಹೋಳಿಕಟ್ಟಿ, ಮಹಾಂತೇಶ ಬಾಡಗಿ, ಬೀರಪ್ಪ ಯಂಕಚ್ಚಿ, ಸುನೀಲ ಸಂಕ, ಶಿವು ಸಂಖ,
ಮಯೂರ ಸಿಂಗೆ, ಸದಾಶಿವ ಬುಟಾಳಿ,ರವಿ ಬಕಾರಿ, ಪ್ರಕಾಶ ಕೋಳಿ,ರವಿ ಬಡಕಂಬಿ,
ಉಮರ ಸೈಯದ್ ಹುಲಗಬಾಳಿ, ಯುಸುಫ್ ಮುಲ್ಲಾ, ಶಬ್ಬಿರ ಸಾತಬಚ್ಚೆ, ಮಹಿಳಾ ಕಾಂಗ್ರೆಸ್ ಮುಖಂಡರಾದ ರೇಖಾ ಪಾಟೀಲ,ಸುನಿತಾ ಐಹೊಳೆ,ಮಹದೇವಿ ಹೋಳಿಕಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.////

ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿ ಪ್ರತಿಭಟಿಸಿದ ಕಾಂಗ್ರೆಸ್ ಮುಖಂಡರು

ಕಾಗವಾಡ:     ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು ಇದನ್ನು ಖಂಡಿಸಿ ಕಾಗವಾಡ ಪಟ್ಟಣದ ಪೆಟ್ರೊಲ್ ಬಂಕ್ನಲ್ಲಿ  ಮಾಜಿ ಸಚಿವ ವೀರಕುಮಾರ ಪಾಟೀಲ್ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನೇತೃತ್ವದಲ್ಲಿ ಸೈಕಲ್ ಏರಿ ವಿನೂತನವಾಗಿ ಪ್ರತಿಭಟನೆ ನಡೆಸಿದರು

 

ಪ್ರತಿಭಟನೆಯಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮೋದಿ ಹಠಾವೋ ದೇಶ ಬಚಾವೋ,ಘೋಷಣೆ ಕೂಗಿ ಪ್ರತಿಭಟಿಸಿದರು

 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವೀರಕುಮಾರ ಪಾಟೀಲ್,ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಹೊಡೆತದಿಂದ ಜನರು ಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಬಡವರ ಮೇಲೆ ಬರೆ ಎಳೆಯುತ್ತಿದೆ.ಜನ ಕೇಂದ್ರ ಸರ್ಕಾರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವದು ಶತಸಿದ್ದ ಮತ್ತು ನಮ್ಮ ಕಾಂಗ್ರೆಸ್ ಪಕ್ಷ ತೈಲ ಬೆಲೆ ಇಳಿಕೆ ಆಗುವವರೆಗೆ ಹೋರಾಟ ಮುಂದುವರೆಸುತ್ತದೆ.ಜನರು ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ  ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು ಇದು ಬಿಜೆಪಿ ಪಕ್ಷದ ದುರಾಡಳಿತವೇ ಕಾರಣವಾಗಿದೆ.  ಬಿಜೆಪಿ ಪೆಟ್ರೋಲ್ ,ಡಿಸೆಲ್,ಹಾಗೂ ಅಡುಗೆ ಸಿಲಿಂಡರ್ ಬೆಲೆ ಗಗಕ್ಕೇರಿಸಿ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

 

ಈ ವೇಳೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ,ಕಾಗವಾಡ ಬ್ಲಾಕ್ ಅಧ್ಯಕ್ಷ ವಿಜಕುಮಾರ ಅಕಿವಾಟೆ, ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ್, ವಿಪುಲ್ ಪಾಟೀಲ್, ಬಾಳು ಪಾಟೀಲ್, ವಿನೋದ ಬರಗಾಲೆ,ಜ್ಯೋತಿಗೌಡ ಪಾಟೀಲ್,ಮತ್ತಿತರರು ಇದ್ದರು///

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');