ಬಾರದ ಲೋಕಕ್ಕೆ ಸಂಚಾರ ಬೆಳೆಸಿದ ವಿಜಯ; ಪಂಚಭೂತಗಳಲ್ಲಿ ಲೀನ

0

ಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ ಸಾವು-ಬದುಕಿನ ನಡುವೆ ಹೋರಾಡಿ, ಮೃತಪಟ್ಟ ನಟ ಸಂಚಾರಿ ವಿಜಯ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಅವರ ಹುಟ್ಟೂರು ಪಂಚನಹಳ್ಳಿಯಲ್ಲಿ ನೆರವೇರಿತು.

ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಪಂಚನಹಳ್ಳಿಯ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಊರಿನವರು ವೀಕ್ಷಿಸಲು ಮುಗಿಬಿದ್ದರು.

ಇದಕ್ಕೂ ಮೊದಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಬಳಿಕ, ಅವರ ಪಾರ್ಥೀವ ಶರೀರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ತರಲಾಯಿತು.

ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರ ಅವರ ಹುಟ್ಟೂರಿಗೆ ಆಗಮಿಸುತ್ತಿದ್ದಂತೇ, ಗ್ರಾಮಸ್ಥರು ಅಂತಿಮ ದರ್ಶನಕ್ಕಾಗಿ ಮುಗಿ ಬಿದ್ದರು. ಪಂಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರರದ ಅಂತಿಮ ದರ್ಶನ ಪಡೆದರು. ಈ ಬಳಿಕ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಹುಟ್ಟೂರು ಪಂಚನಹಳ್ಳಿಯಲ್ಲಿ ನಟ ಸಂಚಾರಿ ವಿಜಯ್ ಅವರ ಮೃತದೇಹದ ಅಂತ್ಯಕ್ರಿಯೆ, ಅವರ ಸ್ನೇಹಿತ ರಘು ತೋಟದಲ್ಲಿ ನೆರವೇರಿತು.

ರಾಜ್ಯಸರ್ಕಾರದಿಂದ ಸಕಲ ಗೌರವ:

ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನದಂತೆ ಅವರ ಅಂತ್ಯಕ್ರಿಯೆ ನೆರವೇರಿತು.

ರಾಜ್ಯಸರ್ಕಾರದಿಂದ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತ್ಯಕ್ರಿಯೆ ವೇಳೆ ಪೊಲೀಸರು ಗೌರವ ಸಮರ್ಪಣೆ ಮಾಡಿದರು.
ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ಸಲ್ಲಿಸಿದರು.

ಸಂಚಾರಿ ವಿಜಯ್ ಸಹೋದರರು ಅಂತಿಮ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ, ಶಾಸಕರಾದ ಸಿಟಿ ರವಿ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ದತ್ತಣ್ಣ ಸೇರಿದಂತೆ ಹಲವರು ಆಗಮಿಸಿದ್ದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');