ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ; ಅಂಗಾಗ ದಾನದಿಂದ 7 ರಿಂದ 10 ಜನರಿಗೆ ಅನುಕೂಲ

0

ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ನಂತರ ಚಿತ್ರನಟ ಸಂಚಾರಿ ವಿಜಯ ಅವರ ದೇಹದ ಏಳು ಭಾಗಗಳನ್ನ ಬೇರೆಯವರಿಗೆ ದಾನ ಮಾಡಿದ್ದು, ಇದೀಗ ಏಳು ಜನರಿಗೆ ಹೊಸ ಬದುಕು ಸಿಗಲಿದೆ.

ಆಕಸ್ಮಿಕ ಘಟನೆಯಲ್ಲಿ ನಿಧನರಾದ ವಿಜಯ ಅವರ, ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕವಾಟಗಳನ್ನ ಕುಟುಂಬದವರು ದಾನ ಮಾಡಿದ್ದಾರೆ. ಇದರಿಂದ 7 ರಿಂದ 10  ಜನರಿಗೆ ಅನುಕೂಲವಾಗಿದೆ. ಅಂಗಾಂಗಗಳನ್ನು ಕಸಿ ಮಾಡಬಹುದಾಗಿದೆ.

ಸಂಚಾರಿ ವಿಜಯ ಅವರು ಬದುಕುವುದಿಲ್ಲವೆಂದು ಗೊತ್ತಾದ ತಕ್ಷಣವೇ, ಅವರ ಮನೆಯವರೆಲ್ಲರೂ ಕೂಡಿಕೊಂಡು ಇಂತಹ ಮಹಾನ್ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. 7 ರಿಂದ 10 ಕುಟುಂಬಗಳಿಗೆ ಅನುಕೂಲವಾಗುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');