ಹತ್ತೊಂಬತ್ತನೆಯ ದಿನವೂ ಮುಂದುವರೆದ ಪಡಿತರ ಹಂಚಿಕೆ

0
ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿಯವರ ಸತ್ಯಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದಿಂದ ಅಥಣಿ ತಾಲೂಕಿನ 46  ಗ್ರಾಮಗಳಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದ್ದು  ಹತ್ತೊಂಬತ್ತನೇ ದಿನ ನಂದಗಾಂವ ಮತ್ತು ಬಳವಾಡ ಗ್ರಾಮಗಳಲ್ಲಿ
ಹಸಿದ ಹೊಟ್ಟೆಗೆ ಅನ್ನ ಹಾಕುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿರುವ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರ ಉತ್ತಮ ಕೆಲಸಕ್ಕೆ ಕೈಜೋಡಿಸಿದ ಬಿಜೆಪಿಯ ಯುವ ನಾಯಕ ಹಾಗೂ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಮತ್ತು ಯುವ ಕಾರ್ಯಕರ್ತರು ಇಂದಿನವರೆಗೆ  ಸುಮಾರು 85 ಸಾವಿರ ಕಿಟಿಂಬಗಳಿಗೆ ಆಹಾರಧಾನ್ಯಗಳ ಕಿಟ್ಟುಗಳನ್ನು ಗ್ರಾಮೀಣ ಬಾಗದಲ್ಲಿ ವಿತರಿಸಿದ್ದಾರೆ.
 ನಂದಗಾಂವ ಮತ್ತು ಬಳವಾಡ ಗ್ರಾಮದಲ್ಲಿ 3 ಸಾವಿರದ ಐದನೂರು ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಕಾರ್ಯಕರ್ತ ದಿಲೀಪ ಕಾಂಬಳೆ ಡಿಸಿಎಮ್ ಲಕ್ಷ್ಮಣ ಸವದಿ ಅವರು ಯಾವತ್ತಿಗೂ ಬಡವರ ಹೃದಯದಲ್ಲಿ ನೆಲೆಸಿದ ದೇವರಿದ್ದಂತೆ.ಜಗತ್ತಿನಲ್ಲಿ ಹಸಿದವರ ಹಸಿವು ನೀಗಿಸುವಂತಹ ಮತ್ತು ಬಾಯಾರಿದವರಿಗೆ ನೀರು ಕೊಡುವಂತ ಪುಣ್ಯ ಕಾರ್ಯ ಮತ್ತೊಂದಿಲ್ಲ.ಜನರ ನಾಡಿಮಿಡಿತವನ್ನು ಅರಿತು ಡಿಸಿಎಮ್ ಲಕ್ಷ್ಮಣ ಸವದಿ ಅವರು ಆಹಾರಧಾನ್ಯಗಳ ಕಿಟ್ ಕೊಡುತ್ತಿರುವದರಿಂದ ಸಾವಿರಾರು ಕುಟುಂಬಗಳ ಸಂಕಷ್ಟ ನೀಗಿಸಲು ಸಾಧ್ಯವಾಗಿದೆ ಜನರ ಹಾರೈಕೆ ಮತ್ತು ದೇವರ ಆಸಿರ್ವಾದ ಯಾವತ್ತಿಗೂ ಡಿಸಿಎಮ್ ಲಕ್ಷ್ಮಣ ಸವದಿ ಮತ್ತು ಅವರ ಕುಟುಂಬದ ಮೇಲೆ ಇರಲಿದೆ ಎಂದರು.ಈ ವೇಳೆ ನಂದಗಾಂವ ಮತ್ತು ಬಳವಾಡ ಗ್ರಾಮಗಳ ಬಿಜೆಪಿ ಮುಖಂಡರು, ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');