ಕೋವಿಡ್-19 ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಮನುಕುಲದ ಉಳಿವಿನೆಡೆಗೆ ಪ್ರೊ. ಎಂ.ರಾಮಚಂದ್ರಗೌಡ – ಕುಲಪತಿಗಳು

0

ಕೋವಿಡ್-19 ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಮನುಕುಲದ ಉಳಿವಿನೆಡೆಗೆ
ಪ್ರೊ. ಎಂ.ರಾಮಚಂದ್ರಗೌಡ – ಕುಲಪತಿಗಳು   ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶವು ಕೋವಿಡ್-19 ಎರಡನೆಯ ಅಲೆಯ ಸಂದರ್ಭದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನುಷ್ಯನ ಸ್ವಸ್ಥ ಜೀವನದೆಡೆಗೆ ಕರೆದೊಯ್ಯಲು ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 316 ರಾಷ್ಟ್ರೀಯ ಸೇವಾ ಯೋಜನಾ ಘಟಕಗಳನ್ನು ಹೊಂದಿದ್ದು, 316 ಕಾರ್ಯಕ್ರಮ ಅಧಿಕಾರಿಗಳು ಹಾಗೂ 25,000 ಸ್ವಯಂ ಸೇವಕರೊಂದಿಗೆ ಕೋವಿಡ್-19 ಮಹಾಮಾರಿ ಸಲುವಾಗಿ ಕೆಲಸ ನಿರ್ವಹಿಸುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಹಾಗೂ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾಧಿಕಾರಿಗಳಾದ ಪ್ರೊ. ಬಿ.ಎಸ್. ನಾವಿಯವರು ಜನರಲ್ಲಿ ಕೋವಿಡ್-19 ಕುರಿತು ಅರಿವು ಮೂಡಿಸುವುದು, ಲಸಿಕಾ ಅಭಿಯಾನಗಳನ್ನು ಹಮ್ಮಿಕೊಳ್ಳುವುದು, ಮಾರುಕಟ್ಟೆಗಳಲ್ಲಿ ಸಾನಿಟೈಸರ್, ಮಾಸ್ಕ್ ವಿತರಿಸುವುದು, ಆಹಾರ ಪೊಟ್ಟಣ ತಯಾರಿಸಿ ಹಂಚುವುದು, ಎನ್.ಜಿ.ಓ. ಗಳ ಜೊತೆ ಕಾರ್ಯ ನಿರ್ವಹಿಸುವುದು, ಕೋವಿಡ್‍ಕೇರ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದು, ಪೋಸ್ಟರ್ ಮತ್ತು ಹೊರ್ಡಿಂಗ್ಸ್‍ಗಳ ಮೂಲಕ ಅರಿವು ಮೂಡಿಸುವ ಕಾರ್ಯದೊಂದಿಗೆ ಜನರ ಓಳಿತಿಗಾಗಿ ಶ್ರಮವಹಿಸುತ್ತಿದ್ದಾರೆ.

ಬಡಜನರಿಗೆ ಮತ್ತು ನಿರ್ಗತಿಕರಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಸಹಕಾರಿಯಾಗುವುದು, ಮನೆ ಮನೆಗಳಿಗೆ ತಿರುಗಾಡಿ ಮಾಸ್ಕಗಳನ್ನು ವಿತರಿಸಿ ಕೋವಿಡ್-19 ವೈರಸ್ ಕುರಿತಾಗಿ ಮತ್ತು ಕೋವಿಡ್ ಲಸಿಕೆಯ ಮಾಹಿತಿ ನೀಡಿ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಲಾಕಡೌನ್ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಮಹಾವಿದ್ಯಾಲಯದ ಘಟಕಗಳು ಸೇರಿ ಆನ್‍ಲೈನ್ ವೆಬಿನಾರಗಳನ್ನು ಹಮ್ಮಿಕೊಳ್ಳುತ್ತಿವೆ. ಪ್ರಮುಖವಾಗಿ ಕೋವಿಡ್-19ರ ಸಂದರ್ಭದಲ್ಲಿ ಸ್ವಯಂ ಸೇವಕರ ಪಾತ್ರ, ಕೋವಿಡ್ ವೈರಸ್ ಮತ್ತು ಲಸಿಕಾ ಜಾಗೃತಿ ಕಾರ್ಯಕ್ರಮ, ಮಾನಸಿಕ ಸಧೃಡತೆಗಾಗಿ ಯೋಗ, ಇಮ್ಯೂನಿಟಿ ಹೆಚ್ಚಿಸಲು ಸಹಕಾರಿಯಾಗುವ ಕೆಲಸಕಾರ್ಯ ತಿಳಿಸುವುದು, ಲಿಂಗತಾರತಮ್ಯ ಕುರಿತ ಕಾರ್ಯಕ್ರಮ, ಲಾಕಡೌನ್ ಸಂದರ್ಭದಲ್ಲಿ ವೇಳೆಯ ಉಪಯುಕ್ತತೆ, ಕೋವಿಡ್-19 ಆರ್ಥಿಕತೆ ಸವಾಲುಗಳು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಮಾಸ್ಕ್ ದಿನಾಚರಣೆ, ಭೂ ದಿನಾಚರಣೆ, ವಿಶ್ವ ಜಲ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ, ಕ್ಯಾಚ್ ದ ರೇನ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಮುಖಿ ಕಾರ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಕೋಶ ಮಾಡುತ್ತಿದೆ. ಕಾರ್ಯಕ್ರಮ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಲಸಿಕಾ ಕೇಂದ್ರಗಳಲ್ಲಿ ಸಹಾಯ ಹಸ್ತ ನೀಡಿ, ಕೋವಿಡ್ ವಾರಿಯರ್ಸ್‍ಗಳಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹ. ಸ್ವಯಂ ಸೇವಕರು ಈ ಸಂದರ್ಭದಲ್ಲಿ ರಕ್ತಧಾನ ಮಾಡಿ ರೋಗಿಗಳ ಸಹಾಯಕ್ಕೆ ನಿಂತು, ಮಾನವಿಯತೆ ಮೆರೆದು ಮನುಕುಲದ ಉಳಿವಿನೆಡೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');