ಕೊರೊನಾಗೆ ಐದು ದಿನದ ಬಾಣಂತಿ ಸಾವು; ಮಗು ತಬ್ಬಲಿ

0

ಮಂಡ್ಯ: ಕೊರೊನಾಗೆ ಐದು ದಿನದ ಬಾಣಂತಿ ಸಾವನ್ನಪ್ಪಿದ್ದು, ಪುಟ್ಟ ಕಂದಮ್ಮ ಇದೀಗ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಶಿಲ್ಪಶ್ರೀ (32) ಕೊರೊನಾಗೆ ಬಲಿಯಾಗಿರುವ ಬಾಣಂತಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿಗೆ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಕಾಣಿಸಿಕೊಂಡಿತ್ತು. ತುಂಬು ಗರ್ಭಿಣಿಯಾಗಿದ್ದ ಶಿಲ್ಪಶ್ರೀ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿ 5 ದಿನಕ್ಕೆ ಪ್ರಾಣವನ್ನು ಬಿಟ್ಟಿದ್ದಾರೆ.

ಮಗು ಜನಸಿದ ಎರಡು ದಿನಗಳಲ್ಲಿ ಶಿಲ್ಪಶ್ರೀ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಶಿಲ್ಪಶ್ರೀಗೆ ಸೂಕ್ತವಾದ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿತ್ತು. ಬಳಿಕ ಶಿಲ್ಪಶ್ರೀ ಚಿಕಿತ್ಸೆಗೆ ಸ್ಪಂದಿಸದ ಕಾರಣ ಸಾವನ್ನಪ್ಪಿದ್ದಾರೆ. ಇಡೀ ಮನುಕುಲವನ್ನೆ ಕಂಗಾಲಾಗುವಂತೆ ಮಾಡಿರುವ ಕೊರೊನಾ ಐದು ದಿನದ ಕಂದಮ್ಮನಿಂದ ತಾಯಿಯನ್ನು ಬೇರ್ಪಡಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');