ಬೆಳಗಾವಿಯಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿಗೆ ಔಷಧ : ಮಾರಾಟ, ಇಬ್ಬರ ಬಂಧನ

0

ಬೆಳಗಾವಿ : ಬ್ಲಾಕ್ ಫಂಗಸ್ ಕಾಯಿಲೆಗೆ ನೀಡುವ ಔಷಧವನ್ನು ಕಾಳ ಸಂತೆಯಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದ ತಯ್ಯಬ್ ನಯೂಬ್ ಮನಿಯಾರ (21) ಹಾಗೂ ಮುಜಪರ್ ಅರೀಫ್ ಪಠಾಣ‌ (22) ಬಂಧಿತರು.

ಬ್ಲ್ಯಾಕ್ ಪಂಗಸ್ ರೋಗಕ್ಕೆ ನೀಡುವ ಅಂಪೋಟೆರಿಸಿನ್ -ಬಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಖದೀಮರು. ಇಂಜೆಕ್ಷನ್ ಮೂಲ ಬೆಲೆ 310 ರೂಪಾಯಿಇದೆ. ಅದನ್ನು ಕಾಳ ಸಂತೆಯಲ್ಲಿ 3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಮಾಹಿತಿ ಆದಾರದ ಮೇಲೆ  ಬೆಳಗಾವಿ ಸಿಇಎನ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಸಿಇಎನ್ ಪೊಲೀಸರು ನಡೆಸಿದ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರಿಂದ 50 ಸಾವಿರ ಮೌಲ್ಯದ ‌ ಅಂಪೋಟೆರಿಸಿನ್ -ಬಿ ಇಂಜೆಕ್ಷನ್ ನ 28 ವಾಯಲ್, ಎರಡು ಮೊಬೈಲ್ ಪೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');