ಮದ್ಯಾಹ್ನದ ಬಿಸಿ ಊಟಕ್ಕೆ ಕನ್ನ ಹಾಕಿದ ಅಧಿಕಾರಿ ಅಮಾನತ್ತು

0
ಅಥಣಿ ಮತ್ತು ಕಾಗವಾಡ ತಾಲೂಕಿನ ಮದ್ಯಾಹ್ನದ ಬಿಸಿಊಟ ಸಹಾಯಕ ನಿರ್ದೇಶಕ ರಿಯಾಜ ಮುಲ್ತಾನಿ ನಿಯಮಬಾಹಿರವಾಗಿ ಅಗತ್ಯ ಇಲ್ಲದ ಶಾಲೆಗಳಿಗೆ ತೊಗರಿ ಬೇಳೆಯನ್ನು ವಿತರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿದೆ.ಮೇಲಾಧಿಕಾರಿಗಳ ಗಮನಕ್ಕೆ ಬರದಂತೆ ಸಹಾಯಕ ನಿರ್ದೇಶ ಮುಲ್ತಾನಿ ಅವರು 37 ದಿನಗಳಿಗೆ ಎನ್ ಜಿ ಓ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಒಟ್ಟು 121 ಶಾಲೆಗಳಿಗೆ ಕೊರತೆಯಾದ 38.32 ಕ್ವಿಂಟಲ್ ತೊಗರಿಬೇಳೆಯನ್ನು ಕೊಡದೆ ಎನ್ ಜಿ ಓ ಗಳಿಂದ ಬಿಸಿ ಊಟ ನೀರ್ವಣೆ ಆಗುತ್ತಿರುವ ಶಾಲೆಗಳಿಗೆ ಮತ್ತು ಸ್ವ ಸಹಾಯ ಸಂಘಗಳಿಂದ ನೀರ್ವಹಣೆ ಆಗುತ್ತಿರುವ ಎರಡು ಶಾಲೆಗಳಿಗೆ ಅಡುಗೆ ಕೇಂದ್ರದ ಒಂದು ಶಾಲೆಗೆ ನಿಯಮಬಾಹಿರವಾಗಿ ಖಾಸಗಿ ವಾಹನಗಳ ಮೂಲಕ ಹಂಚಿರುವದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರ ವಿರುದ್ದ ಕರ್ನಾಟಕ ನಾಗರಿಕ ಸೇವೆ 1957 ಅಧಿನಿಯಮಗಳ ಅಡಿಯಲ್ಲಿ ರಿಯಾಜ್ ಮುಲ್ತಾನಿ ಅವರನ್ನು ಅಮಾನತ್ತು ಮಾಡಲಾಗಿದೆ.ಈಗಾಗಲೇ ಸರ್ಕಾರದಿಂದ ಸರಬರಾಜು ಆಗುತ್ತಿದ್ದ ಮದ್ಯಾಹ್ನದ ಬಿಸಿ ಊಟ ಯೋಜನೆ ಅಡಿಯಲ್ಲಿ ಲಾಕ್ ಡೌನ ಸಮಯದಲ್ಲಿ ಒಂದರಿಂದ ಐದನೆ ತರಗತಿ ಆರರಿಂದ ಎಂಟನೆ ತರಗತಿ ಮತ್ತು ಒಂಭತ್ತು ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಅಡುಗೆ ಎಣ್ಣೆ,ಅಕ್ಕಿ,ಗೋಧಿ ಮತ್ತು ಬೇಳೆ ಪದಾರ್ಥಗಳನ್ನು ವಿತರಿಸುವಾಗಲು ನಿಗದಿತ ಪ್ರಮಾಣದಲ್ಲಿ ವಿತರಣೆ ಮಾಡದೆ ಇರುವ ಆರೋಪಗಳು ಕೂಡ ಕೇಳಿ ಬಂದಿದ್ದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಡವರ ಮಕ್ಕಳು ಸರ್ಕಾರದ ಯೋಜನೆಯಿಂದ ವಂಚಿತರಾಗುವ ಹಾಗೆ ಮಾಡಿ ಅಪಾರ ಪ್ರಮಾಣದಲ್ಲಿ ಬೇನಾಮಿ ಆಸ್ತಿ ಮಾಡಿರುವ ಸಾಧ್ಯತೆ ಇದ್ದು ಕೇವಲ ಅಮಾನತ್ತು ಮಾಡಿದರೆ ಸಾಲದು ರಿಯಾಜ್ ಮುಲ್ತಾನಿ ಅವರ ಆಸ್ತಿ ವಿವರಗಳನ್ನು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಪ್ರಜ್ಞಾವಂತ ಜನರ ಆಗ್ರಹವಾಗಿದೆ.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');