ಹನ್ನೊಂದನೆಯ ದಿನವೂ ಮುಂದುವರೆದ ಗಜಾನನ ಮಂಗಸೂಳಿ ಜನಸೇವೆ

0
ಹನ್ನೊಂದನೆಯ ದಿನವೂ ಮುಂದುವರೆದ ಗಜಾನನ ಮಂಗಸೂಳಿ ಜನಸೇವ
 ಅಥಣಿ: ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ಆರ್ಥಿಕ ದುರ್ಬಲರಿಗೆ ಸಹಾಯ ಚಾಚುವ ಕೆಲಸ ಮುಂದುವರೆದಿದೆ.ಕೊರೊನಾ ವಾರಿಯರ್ ಗಳಿಗೆ ಅಲ್ಪೋಪಹಾರ ಮತ್ತು ಕೋವಿಡ್ ಸೊಂಕಿತರಿಗೆ ಉಪಯುಕ್ತವಾಗುವ ಔಷಧಿ ಕಿಟ್ ವಿತರಣೆ ಮಾಡಲಾಗುತ್ತಿದ್ದು ಇಂದು ಬ್ಲೆಸ್ಸಿಂಗ್ ಚಿಲ್ಡ್ರನ್ ಹೋಮ್ ನಲ್ಲಿ ವಾಸವಾಗಿರುವ ಇಪ್ಪತ್ತನಾಲ್ಕು ಮಕ್ಕಳಿಗೆ ಇಪ್ಪತ್ತೈದು ಕೇಜಿ ಜೋಳ,ಇಪ್ಪತ್ತೈದು ಕೇಜಿ ಗೋದಿ ಮತ್ತು ಅಕ್ಕಿ ಹಾಗೂ ಹತ್ತು ಲೀಟರ್ ಎಣ್ಣೆ,ಅವಲಕ್ಕಿ,ರವೆ,ಬೇಳೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಗಜಾನನ ಮಂಗಸೂಳಿ ವಿತರಣೆ ಮಾಡಿದರು.
ಈ ಮೊದಲು ಪೋಲಿಸರು, ಪೌರ ಕಾರ್ಮಿಕರು,ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರಿಗೆ ಅಲ್ಪೋಪಹಾರ ಮತ್ತು ಔಷಧಿ ಹಾಗೂ ಸತೀಶ ಜಾರಕಿಹೋಳಿ ಅವರು ಕಳುಹಿಸಿದ ಸ್ಯಾನಿಟೈಜರ್ ಮತ್ತು ಮಾಸ್ಕ ಗಳನ್ನು ವಿತರಣೆ ಮಾಡಿದ್ದು ತಮ್ಮ ಜನಸೇವೆಯನ್ನು ಮುಂದುವರೆಸಿದ್ದಾರೆ.
ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಕಳೆದ ಹನ್ನೊಂದು ದಿನಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಕಳೆದ ಹನ್ನೊಂದು ದಿನಗಳಿಂದ ಅಂತ್ಯ ಸಂಸ್ಕಾರ ಮಾಡುವ ಜನರಿಗೆ ಪಿಪಿಇ ಕಿಟ್,ಅಡುಗೆ ಸಾಮಗ್ರಿ,ಆಹಾರದ ದಿನಸಿ ಬಾಕ್ಸ ಕೊಡುವ ಕೆಲಸವನ್ನು ಮಾಡುತ್ತ ಬಂದಿದ್ದು ಇನ್ನೂ ಎರಡು ಮೂರು ದಿನಗಳಲ್ಲಿ ಅಲೆಮಾರಿಗಳು,ಮನೆ ಕೆಲಸದವರು,ಬೀದಿ ವ್ಯಾಪಾರಸ್ಥರು,ಹಾಗೂ ಪತ್ರಿಕಾ ವಿತರಕರು ಸೇರಿದಂತೆ ಎಲ್ಲ ದುಡಿಯುವ ವರ್ಗದ ಜನರಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತದೆ ಅಲ್ಲದೆ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ ಇರುವದರಿಂದ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸದೆ ನೇರವಾಗಿ ದಿನಸಿ ಪದಾರ್ಥಗಳನ್ನು ವಿತರಿಸಲಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ಅನೀಲ ಸುಣಧೋಳಿ ಸ್ವತಃ ಕೋವಿಡ್ ಸೊಂಕಿತರಾಗಿ ಚಿಕಿತ್ಸೆ ಬಳಿಕ ಗುಣಮುಖರಾದ ಗಜಾನನ ಮಂಗಸೂಳಿ ಅವರು ಜನಪರ ಕೆಲಸವನ್ನು ಮುಂದುವರೆಸಿದ್ದು ಈಗಾಗಲೇ ಕೊರೊನಾ ಸೊಂಕಿತರಿಗೆ ಉಪಯೋಗವಾಗುವಂತೆ ಔಷಧಿ  ವಿತರಿಸಿದ್ದಲ್ಲದೆ ದಿನಸಿ ಪದಾರ್ಥಗಳನ್ನು ವಿತರಿಸುವ ಕಾರ್ಯ ಮುಂದುವರೆಸಿದ್ದಾರೆ.ನೊಂದವರ ಕಷ್ಟಕ್ಕೆ ಮಿಡಿಯುವ ಅವರ ಮನಸ್ಸು ವಿಶಾಲವಾದದ್ದು ಭಗವಂತ ಅವರಿಗೆ ಇನ್ನಷ್ಟು ಸಹಾಯ ಸಹಕಾರ ಮಾಡುವ ಶಕ್ತಿಯನ್ನು ನೀಡಲಿ ಎಂದರು.
ಈ ವೇಳೆ,ರಮೇಶ ಸಿಂದಗಿ,ಸುನೀಲ ಸಂಖ,ಶ್ರೀಕಾಂತ ಪೂಜಾರಿ, ಧರೆಪ್ಪ ಠಕ್ಕನ್ನವರ,ರವಿ ಬಡಕಂಬಿ,ಕಪೀಲ ಘಟಕಾಂಬಳೆ, ಸುನೀತಾ ಐಹೊಳೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');