ನೀ ಮಾಡಿದ ಪುಣ್ಯ ನಿನ್ನನ್ನು ಕಾಪಾಡುತ್ತದೆ

0

ನನಗೆ ನಮ್ಮ ಜೀವನದಲ್ಲಿ ಕೆಲವು ಘಟನೆಗಳು ನಡೆದಾಗ ಅದನ್ನು ನಂಬಲು ಸಾಧ್ಯವಾಗುವುದಿಲ್ಲ . ಕೆಲವು ಘಟನೆಗಳನ್ನು ನೋಡಿದಾಗ ನಮಗೆ ದಿಗ್ಬ್ರಮೆ ಉಂಟಾಗುತ್ತದೆ . ಇಂಥ ಒಂದು ಘಟನೆಗಳು ನಡೆಯುವುದಕ್ಕೆ ಸಾಧ್ಯವಾ ಎಂದು ಆಶ್ಚರ್ಯಚಕಿತರಾಗುತ್ತೇವೆ .

ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ನಡೆದ ನೈಜ ಘಟನೆಯೇ ಇದಕ್ಕೆ ಸಾಕ್ಷಿ . ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ಸಾವಿತ್ರಿ ಎಂಬ ಹೆಣ್ಣುಮಗಳು ತನ್ನ ಗಂಡನೊಂದಿಗೆ ಸುಖಸಂಸಾರ ನಡೆಸುತ್ತಿದ್ದಳು. ಸಾವಿತ್ರಿಗೆ 2 ಮುದ್ದಾದ ಮಕ್ಕಳಿದ್ದರು. ಒಬ್ಬ ಗಂಡು ಮಗ ಇನ್ನೊಬ್ಬಳು ಹೆಣ್ಣುಮಗಳು . ರಾಜೇಶ್ ಎಂಬ ಗಂಡು ಮಗ ಡಿಗ್ರಿ ಪದವಿ ಮುಗಿದು ಕೆಲಸಕ್ಕೋಸ್ಕರ ಅಲೆದಾಡುತ್ತಿರುತ್ತಾನೆ .ಸಾವಿತ್ರಿಯ ಮಗಳು ಹತ್ತನೇ ತರಗತಿ ಓದುತ್ತಿರುತ್ತಾಳೆ .ಸಾವಿತ್ರಿ ಉಪಕಾರ ಮಾಡುವ ಗುಣ ಹೊಂದಿದ್ದ ಮಹಿಳೆ .

ಪ್ರತಿದಿನ ಮಧ್ಯಾಹ್ನ ಊಟವಾದ ನಂತರ ಸಾವಿತ್ರಿ ಉಳಿದ ಅನ್ನ ಹಾಗೂ ಪದಾರ್ಥಗಳನ್ನು ತಟ್ಟೆಯಲ್ಲಿ ಹಾಕಿ ಮನೆ ಮುಂದಿರುವ ಗೇಟ್ ಬಳಿ ನೀಡುವ ಹವ್ಯಾಸ ಹೊಂದಿದ್ದರು . ಏಕೆಂದರೆ ಉಳಿದ ಅನ್ನ ಪದಾರ್ಥಗಳನ್ನು ಪ್ರಾಣಿ ಪಕ್ಷಿಗಳು ತಿಂದು ಹೊಟ್ಟೆ ತುಂಬಿಕೊಳ್ಳಲು ಎನ್ನುವುದು ಸಾವಿತ್ರಿ ಯೋಚನೆ .

ಆದರೆ ಅಚ್ಚರಿ ಎಂಬಂತೆ ಒಂದು ದಿನ ಸಾವಿತ್ರಿ ತಟ್ಟೆಯಲ್ಲಿ ಇಟ್ಟಿದ್ದ ಅನ್ನ ಪದಾರ್ಥವನ್ನು ಒಬ್ಬ ಮುದುಕ ಬಂದು ತಿಂದು ಹೋಗುತ್ತಾನೆ .ಇದನ್ನು ನೋಡಿದ ಸಾವಿತ್ರಿ ಪಾಪ ವಯಸ್ಸಾದ ಮುದುಕ ಹಸಿವು ತಾಳಲಾರದೆ ಪ್ರಾಣಿಗೆ ಹಾಕಿದ್ದ ಊಟವನ್ನು ತಿಂದು ಎಂದು ಮನಸಿನಲ್ಲೇ ಅಂದುಕೊಂಡು ಸುಮ್ಮನಾಗುತ್ತಾಳೆ .

ಆದರೆ ಸಾವಿತ್ರಿಗೆ ಮರುದಿನ ಇನ್ನೊಂದು ಆಶ್ಚರ್ಯ ಕಾದಿತ್ತು ಅದೇನೆಂದರೆ ಮರುದಿನ ಕೂಡ ಆ ಮುದುಕ ಗೇಟ್ ಬಳಿ ಹಾಕಿದ್ದ ತಟ್ಟೆಯ ಊಟವನ್ನು ತಿಂದು ಹೋಗುತ್ತಾನೆ . ಮುದುಕ ಒಂದಲ್ಲ ಎರಡಲ್ಲ ಪ್ರತಿದಿನ ಬರಲು ಶುರು ಮಾಡುತ್ತಾನೆ .

ಅವನು ಪ್ರತಿದಿನ ಬಂದು ತಟ್ಟೆಯಲ್ಲಿರುವ ಊಟವನ್ನೇ ಉಂಡು ನಂತರ ಸಾವಿತ್ರಿಗೆ ನಿನ್ನ “ಪಾಪ ನಿನ್ನಲ್ಲಿಯೇ ಉಳಿಯುತ್ತದೆ ಆದರೆ ನೀನು ಮಾಡಿರುವ ಪುಣ್ಯ ನಿನ್ನನ್ನು ಹುಡುಕಿಕೊಂಡು ನಿನ್ನ ಬಳಿ ಬರುತ್ತದೆ “ಎಂದು ಒಂದು ಒಗಟಿನ ಮಾತು ಹೇಳಿ ಹೋಗುತ್ತಾನೆ. ಪ್ರತಿದಿನ ಊಟ ಮಾಡಿದ ನಂತರ ಈ ಮುದುಕ ಬಂದು ಪಾಪಪುಣ್ಯದ ಮಾತುಗಳನ್ನು ಹೇಳುತ್ತಾನೆ. ಸಾವಿತ್ರಿಗೆ ಈ ಒಗಟಿನ ಮಾತು ಅರ್ಥವಾಗದೆ ಸಿಟ್ಟು ಬರುತ್ತದೆ .

ಸಾವಿತ್ರಿಗೆ ಮುದುಕನ ಕಾಟ ತಡೆಯಲಾಗದೆ ಮರುದಿನ ಊಟದಲ್ಲಿ ವಿಷ ಬೆರೆಸಲು ಮನಸ್ಸು ಮಾಡಿ ಮರುದಿನ ತಟ್ಟೆಯಲ್ಲಿ ಊಟ ಹಾಕಿ ಅದಕ್ಕೆ ವಿಷವನ್ನು ಬೆರೆಸುತ್ತಾಳೆ .ಆದರೆ ಅವಳ ಮನಸ್ಸಿಗೆ ಇದು ಒಳ್ಳೆ ಕೆಲಸವಲ್ಲ ಎಂದು ಅನಿಸುತ್ತದೆ .ತಕ್ಷಣ ಶುದ್ಧವಾದ ಊಟವನ್ನು ಹಾಕಿ ಅಜ್ಜನಿಗೆ ನೀಡುತ್ತಾಳೆ . ಮುದುಕ ಊಟವನ್ನು ಮಾಡಿ ಮತ್ತೆ ಅದೇ ಒಗಟನ್ನು ಹೇಳಿ ಮಾಯವಾಗುತ್ತಾನೆ. ಸಾವಿತ್ರಿ ಒಗಟಿನ ಅರ್ಥವನ್ನು ಕೇಳಿದರೂ ಕೂಡ ಮುದುಕ ಉತ್ತರಿಸದೆ ಅವನ ಪಾಡಿಗೆ ಅವನು ಹೋಗಿರುತ್ತಾನೆ . ಸಾವಿತ್ರಿಗೆ ತಲೆಕೆಡುತ್ತದೆ ದಿನವಿಡೀ ಇದರ ಬಗ್ಗೆ ಈ ಒಗಟಿನ ಬಗ್ಗೆ ಚಿಂತಿಸುತ್ತಾಳೆ .

ಆದರೆ ಒಂದು ದಿನ ಸಾವಿತ್ರಿಯ ಮಗನಾದ ರಾಜೇಶ್ , ರಾತ್ರಿ ಆದರೂ ಮನೆಗೆ ಬರುವುದಿಲ್ಲ . ಇದರಿಂದ ಸಾವಿತ್ರಿ ಮತ್ತು ಅವಳ ಗಂಡನಿಗೆ ಭಯ ಶುರುವಾಗುತ್ತದೆ . ಸಾವಿತ್ರಿ ಮತ್ತು ಗಂಡ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ಕೊಡುತ್ತಾರೆ . ಸಾವಿತ್ರಿ ಮತ್ತು ಗಂಡ ಮನೆಗೆ ತೆರಳುವಷ್ಟರಲ್ಲಿ ಗೇಟ್ ಬಳಿ ಸಾವಿತ್ರಿ ಮಗ ರಾಜೇಶ್ ನಿಂತಿರುತ್ತಾನೆ . ಅವನ ಬಟ್ಟೆಗಳು ಹರಿದಿರುತ್ತದೆ ಹಾಗೆ ದೇಹದ ಮೇಲೆ ಗಾಯಗಳು ಆಗಿರುತ್ತದೆ. ಆಗ ಗಾಬರಿಯಿಂದ ಸಾವಿತ್ರಿ ಏನಾಯ್ತು ಮಗ? ಎಂದು ಕೇಳುತ್ತಾಳೆ.

ಆಗ ಮಗ ರಾಜೇಶ್ “ನಾನು ಇಂದು ಮನೆಗೆ ತೆರಳುವಾಗ ಅಪಘಾತ ಆಯ್ತು ನಾನು ರಸ್ತೆ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದೆ ,ಆದರೆ ರಸ್ತೆ ಮೇಲೆ ಓಡಾಡುವ ಯಾವ ಜನರು ನನ್ನ ಸಹಾಯಕ್ಕೆ ಬರಲೇ ಇಲ್ಲ . ಸ್ವಲ್ಪ ಸಮಯದ ನಂತರ ಒಬ್ಬ ಮುದುಕ ಬಂದು ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಕಾಪಾಡಿದ ” ಹೇಳುತ್ತಾನೆ . ಆಗ ಸಾವಿತ್ರಿ ಯಾವ ಮುದುಕ ಎಂದು ಕೇಳುತ್ತಾಳೆ .

ಅಲ್ಲಿ ರಸ್ತೆ ಪಕ್ಕದಲ್ಲಿ ಕುಳಿತಿದ್ದ ಮುದುಕನನ್ನು ರಾಜೇಶ್ ತೋರಿಸುತ್ತದೆ. ಆ ಮುದುಕನನ್ನು ನೋಡಿದ ಸಾವಿತ್ರಿಗೆ ಶಾಕ್ ಆಗುತ್ತದೆ . ಆ ಮುದುಕ ಬೇರೆ ಯಾರೂ ಆಗಿರುವುದಿಲ್ಲ , ಸಾವಿತ್ರಿ ಪ್ರತಿದಿನ ಗೇಟ್ ಬಳಿ ಹಾಕುವ ಊಟವನ್ನು ತಿನ್ನುತ್ತಿದ್ದ ಮುದುಕ . ಆಗ ಸಾವಿತ್ರಿಗೆ ಮುದುಕನ ಒಗಟಿನ ಮಾತುಗಳು ಅರ್ಥವಾಗುತ್ತದೆ . ಆ ಸಮಯದಲ್ಲಿ ಸಾವಿತ್ರಿಗೆ ಮನವರಿಕೆಯಾಗುವುದು ಏನೆಂದರೆ ತಾನು ಮಾಡಿದ ಪುಣ್ಯ ತನಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತದೆ ಎಂದು . ನಾವು ಪುಣ್ಯದ ಕೆಲಸ ಮಾಡಿದರೆ ದೇವರು ನಮಗೆ ಇನ್ನೊಂದು ರೂಪದಲ್ಲಿ ನಮಗೆ ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಉದಾಹರಣೆ .

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');