ರಾತ್ರೋರಾತ್ರಿ ಖ್ಯಾತಿಯಾಗಿದ್ದ ‘ ಬಾಬಾ ಕಾ ಢಾಬಾ’ ಮಾಲೀಕ ಕಾಂತ ಪ್ರಸಾದ್ ಆತ್ಮಹತ್ಯೆಗೆ ಯತ್ನ

0

ಹೊಸದಿಲ್ಲಿ : ಕೊರೊನಾದ ಮೊದಲ ಅಲೆಯಲ್ಲಿ ವ್ಯಾಪಾರವಿಲ್ಲದೇ ಸೋಶಿಯಲ್ ಮೀಡಿಯಾ ಸಹಾಯದಿಂದ ರಾತ್ರೋರಾತ್ರಿ ಖ್ಯಾತಿಗಳಿಸಿದ್ದ ‘ಬಾಬಾ ಕಾ ಢಾಬಾ’ ಖ್ಯಾತಿಯ ಮಾಲೀಕ ಕಾಂತ ಪ್ರಸಾದ್​ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದೆಹಲಿಯ ಮಲ್ವಿಯಾ ನಗರದ ನಿವಾಸಿಯಾಗಿರುವ ಇವರನ್ನ ಸದ್ಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಾಂತ ಪ್ರಸಾದ್ ನಿನ್ನೆ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

81 ವರ್ಷದ ಕಾಂತ ಪ್ರಸಾದ್ ಮದ್ಯ ಹಾಗೂ ನಿದ್ರೆ ಗುಳಿಗೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ನನ್ನ ಅಪ್ಪ ನಿದ್ರೆ ಗುಳಿಗೆ ಮತ್ತು ಮದ್ಯವನ್ನ ತೆಗೆದುಕೊಂಡಿದ್ದಾರೆ ಅಂತಾ ಅವರ ಕಾಂತ ಪ್ರಸಾದ್​ ಪುತ್ರ ಪೊಲೀಸ್ ತನಿಖೆ ವೇಳೆ ಹೇಳಿದ್ದಾರೆ. ಮಲ್ವಿಯಾ ನಗರದಲ್ಲಿ ಚಿಕ್ಕದಾದ ಡಾಬಾ ಇಟ್ಟುಕೊಂಡಿದ್ದ ಇವರು, ಕೊರೊನಾದ ಮೊದಲನೇ ಅಲೆಯಲ್ಲಿ ವ್ಯಾಪಾರ ಇಲ್ಲದೇ ಇವರ ಬದುಕು ತತ್ತರಗೊಂಡಿತ್ತು. ಇದನ್ನ ಗಮನಿಸಿದ ಯೂಟ್ಯೂಬರ್ ಗೌರವ್ ವಾಸಮ್ ಅನ್ನೋರು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರ ಸಂಕಷ್ಟದ ಬಗ್ಗೆ ವಿಡಿಯೋ ಹರಿಬಿಟ್ಟಿದ್ದರು.

ಈ ವಿಡಿಯೋ ನೋಡಿದ ಸೆಲೆಬ್ರಿಟಿಗಳು ಮಿಡಿದಿದ್ದರು, ಕಾಂತ ಪ್ರಸಾದ್​ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಪರಿಣಾಮ ಕಾಂತ ಪ್ರಸಾದ್ ಹಾಗೂ ಆತನ ಪತ್ನಿ ರಾತ್ರೋರಾತ್ರಿ ತುಂಬಾ ಫೇಮಸ್​ ಆಗಿದ್ದರು. ಜೊತೆಗೆ ಅವರ ಢಾಬಾದಲ್ಲಿ ಊಟ ಮಾಡಲು ಜನ ಸಾಗರವೇ ಹರಿದುಬಂದಿತ್ತು. ಇತ್ತೀಚೆಗೆ ಮತ್ತೆ ಜನ ಹೋಟೆಲ್​​ಗೆ ಯಾರೂ ಬರುತ್ತಿಲ್ಲ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿ ಈ ತೀರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');