ಒಂದಲ್ಲಾ…ಎರಡಲ್ಲಾ..ಮೂರನೇ ಮದುವೆಯಾದ ಭೂಪ : ಮೊದಲ ಪತ್ನಿಯಿಂದ ದೂರು

0

ಚಾಮರಾಜನಗರ : ಮೊದಲೇ ಎರಡು ಮದುವೆಯಾಗಿದ್ದ ವ್ಯಕ್ತಿಯೊಬ್ಬ ಲಾಕ್ ಡೌನ್ ನಲ್ಲಿ ಮೂರನೇ ಮದುವೆಯಾಗಿದ್ದು, ಮೊದಲನೇ ಪತ್ನಿ ನ್ಯಾಯಕ್ಕಾಗಿ ದೂರು ನೀಡಿದ್ದಾರೆ.

ಮೈಸೂರಿನ ಜಿಲ್ಲೆ ಟಿ.ನರಸೀಪುರ ತಾಲೂಕು ಅಕ್ಕೂರು ಗ್ರಾಮದ ನಿವಾಸಿ ರಾಜೇಶ್ (35) ವ್ಯಕ್ತಿಯ ವಿರುದ್ಧ ಮೊದಲ ಪತ್ನಿ ದೂರು ನೀಡಿದ್ದಾರೆ.

ರಾಜೇಶ್ 7 ವರ್ಷದ ಅಂತರದಲ್ಲಿ ಮೂರು ಮದುವೆಯಾಗಿದ್ದು, ಟಿ. ನರಸೀಪುರದ ವಾಟಾಳು ಗ್ರಾಮದ ಯುವತಿಯನ್ನು ಮೊದಲ ಮದುವೆಯಾಗಿದ್ದಾನೆ. ಬಳಿಕ ಬೆಂಗಳೂರು ಬಳಿಯ ಹುಲಿದುರ್ಗದ ಮಹಿಳೆ ಜೊತೆ ಎರಡನೇ ಮದುವೆಯಾಗಿದ್ದು, ಇಬ್ಬರನ್ನೂ ಬಿಟ್ಟು ಲಾಕ್​ಡೌನ್​ ವೇಳೆ ಮೂರನೇ ಮದುವೆಯಾಗಿದ್ದಾನೆ ಎನ್ನಲಾಗಿದೆ.

ಗಂಡ ಬುದ್ದಿ ತಿಳಿದ ಎರಡನೇ ಪತ್ನಿ ಆತನಿಂದ ದೂರವೇ ಇದ್ದರು. ಆದರೆ ಮೊದಲನೇ ಪತ್ನಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');