ಕಾಂಗ್ರೆಸ್ ಶಾಸಕ ರೂಪ್ ಜ್ಯೋತಿ ರಾಜೀನಾಮೆ : ಮುಂದಿನ ವಾರ ಬಿಜೆಪಿ ಸೇರ್ಪಡೆ

0

ಗುವಾಹಟ್ಟಿ : ಅಸ್ಸಾಂನ ಕಾಂಗ್ರೆಸ್ ಶಾಸಕ ರೂಪ್ ಜ್ಯೋತಿ ಕುರ್ಮಿ ರಾಜೀನಾಮೆ ನೀಡಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೆ ಸಿದ್ಧತೆ  ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಹ ತಲುಪಿಸಿದ್ದೇನೆ” ಎಂದಿದ್ದಾರೆ.

ರಾಜ್ಯದ ಚಹಾ ಬೆಳೆಗಾರರ ಸಮುದಾಯದ ನಾಯಕನಾಗಿರುವ ರೂಪ್‌ಜ್ಯೋತಿ ಕುರ್ಮಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ವಿಧಾನಸಭೆಯ ಅವರ ಕಚೇರಿಗೆ ತೆರಳಿ ಸಲ್ಲಿಸಿದ್ದಾರೆ.

ಚಹಾ ಬುಡಕಟ್ಟು ಸಮುದಾಯದ ಪ್ರಮುಖ ಸದಸ್ಯರಾದ ಕುರ್ಮಿ, ಕಾಂಗ್ರೆಸ್ ನ ಮಾಜಿ ಸಚಿವ ದಿ. ರೂಪಮ್ ಕುರ್ಮಿಯವರ ಪುತ್ರರಾಗಿದ್ದು, 2006 ರಿಂದ ಮರಿಯಾನಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದೇ 21ರಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವಾಗಿ ಹೇಳಿದ್ದಾರೆ.

ನಾಲ್ಕು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ರೂಪ್‌ಜ್ಯೋತಿ ಕುರ್ಮಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಚ್ಛಾಟಿಸಿತ್ತು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');