ಕೃಷ್ಣಾ ನದಿ ಪ್ರವಾಹ ಸಿದ್ದತೆಗೆ ಪೂರ್ವಭಾವಿಯಾಗಿ ಸಭೆ ನಡೆಸಿದ ರವಿ ಬಂಗಾರಪ್ಪನವರ

0
ಅಥಣಿ :ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸದ್ಯ ಕೃಷ್ಣಾ ಮತ್ತು ಉಪನದಿಗಳಲ್ಲಿ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಹರಿವು ಹಾಗು ಹೆಚ್ಚಳವಾಗಿದ್ದು ಜಿಲ್ಲಾಧಿಕಾರಿಗಳ ಜೊತೆ ಸಿಎಮ್ ಬಿಎಸ್ ವೈ ವಿಡಿಯೋ ಕಾನ್ಪರೆನ್ಸ ಮೂಲಕ ಸಭೆ ನಡೆಸಿದರೆ ಅಥಣಿ ತಾಲೂಕು ಪಂಚಾಯತಿಯಲ್ಲಿ ತಹಶಿಲ್ದಾರ ದುಂಡಪ್ಪ ಕೋಮಾರ ಮತ್ತು ತಾಲ್ಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.ಈ ವೇಳೆ ತಹಶಿಲ್ದಾರ ದುಂಡಪ್ಪ ಕೋಮಾರ ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ ನದಿ ತೀರಕ್ಕೆ ಜನರು ತೆರಳದಂತೆ ಕಟ್ಟೆಚ್ಚರ ವಹಿಸಬೇಕು.ಒಂದು ವೇಳೆ ಪ್ರವಾಹದ ಸ್ಥಿತಿ ನಿರ್ಮಾಣವಾದರೆ ಜನ ಮತ್ತು ಜಾನುವಾರುಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದರು.
ಈ ವೇಳೆ ಮಾತನಾಡಿದ ತಾಲೂಕು ಪಂಚಾಯತಿ ಅಧಿಕಾರಿ ರವಿಬಂಗಾರಪ್ಪನವರ ಪ್ರತಿ ಗ್ರಾಮದಲ್ಲಿ ಪಂಚಾ ವತಿಯಿಂದ ಢಂಗುರ ಸಾರುವ ಮೂಲಕ ಜನರನ್ನು ಎಚ್ಚರಿಸಬೇಕು.ಅಗತ್ಯ ಇರುವ ಗ್ರಾಮಗಳಲ್ಲಿ ಆಯಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಕಂದಾಯ ಇಲಾಖೆ ಮತ್ತು ಸ್ಥಳೀಯ ಬೀಟ್ ಪೋಲಿಸರ ಸಹಕಾರದೊಂದಿಗೆ ಜನರನ್ನು ನದಿ ಪಾತ್ರದಿಂದ ಎತ್ತರದ ಸ್ಥಳಗಳಿಗೆ ತೆರಳುವಂತೆ
 ನೋಡಿಕೊಳ್ಳಬೇಕು.ಬೋಟ್ ಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸಿಕೊಂಡು ನುರಿತ ಈಜುಗಾರರ ಸಂಪರ್ಕದಲ್ಲಿ ಇರುವ ಜೊತೆಗೆ ಕ್ಷಣಕ್ಷಣದ ಮಾಹಿತಿಯನ್ನು ಸಂಭಂಧಪಟ್ಟ ಇಲಾಖೆಗೆ ಕೊಡುವ ಮೂಲಕ ಸಹಕರಿಸಬೇಕು ಅಲ್ಲದೆ ಕಳೆದ ಬಾರಿ ಎಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿತ್ತು ಆ ಸ್ಥಳಗಳಲ್ಲಿ ವಿದ್ಯುತ್, ಕುಡಿಯುವ ನೀರು,ಶೌಚಾಲಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಕಾಳಜಿ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಪ್ರವಾಹ ಸ್ಥಿತಿ ಎದುರಿಸಲು ಸಿದ್ದರಾಗಬೇಕು ಎಂದರು.ಈ ವೇಳೆ ಉಪತಹಶಿಲ್ದಾರ ಮಹದೇವ ಬಿರಾದಾರ,ತಾಲೂಕು ಪಂಚಾಯತಿ ವ್ಯವಸ್ಥಾಪಕ ಉದಯಗೌಡ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');