ಅತಿಕ್ರಮಣತೆರವಿಗೆ ಶಾಸಕ ಬೆನಕೆ ಸೂಚನೆ

0

ಬೆಳಗಾವಿ,  ದಿನಾಂಕ 19-06-2021 ರಂದುಬೆಳಗಾವಿ ಉತ್ತರ ಭಾಗದಜನಪ್ರೀಯ ಶಾಸಕರಾದ ಅನಿಲ ಬೆನಕೆ ಯವರ ನೇತೃತ್ವದಲ್ಲಿಇಂದು ಬೆಳಗಾವಿ ಮಹಾನಗರಪಾಲಿಕೆಆಯುಕ್ತಜಗದಿಶ ಕೆ.ಎಚ. ಹಾಗೂ ಅಭಿಯಂತಕರಾದ ಸಚಿನ ಕಾಂಬಳೆ ಮತ್ತು ಮಂಜುಶ್ರೀ ಜೊತೆಗೆ ಮತ್ತು ಬೆಳಗಾವಿ ರೈತ ಸಂಘದಅಧ್ಯಕ್ಷ ನಾರಾಯನ ಸಾವಂತ, ಸುನಿಲ ಖನ್ನುಕರ ಹಾಗೂ ಸುನಿಲ ಜಾಧವಜೊತೆಗೆ ಲೆಂಡೆ ನಾಲಾ ಹಾಗೂ ಬಳ್ಳಾರಿ ನಾಲಾದ ದುರುಸ್ತಿ ಕಾರ್ಯದ ನಿರೀಕ್ಷಣೆ ಮಾಡಲಾಯಿತು.

ಕೊರೊನಾಅರ್ಭಟತಣ್ಣಗಾಗುತ್ತಿದ್ದಂತೆಯೇಗಡಿನಾಡ ಬೆಳಗಾವಿಯಲ್ಲಿ ಮಳೆರಾಯನ ಅರ್ಭಟ ಹೆಚ್ಚಾಗತೊಡಗಿದೆ.ಇಂತಹ ಸಂದರ್ಭದಲ್ಲಿತೆಗ್ಗು ಪ್ರದೇಶಗಳಲ್ಲಿರುವ ಮನೆಗಳಲ್ಲಿ ನೀರು ಹೊಕ್ಕು ಜನಜೀವನಕ್ಕೆತೊಂದರೆಯಾಗುತ್ತದೆ.ಈ ಪರಿಸ್ಥಿತಿಯನ್ನು ಅರಿತ ಬೆಳಗಾವಿ ಉತ್ತರಕ್ಷೇತ್ರಸಶಾಸಕ ಅನಿಲ ಬೆನಕೆ ಅಧಿಕಾರಿಗಳೊಂದಿಗೆ ನಗರದಲ್ಲಿ ಹರಿದಿರುವ ನಾಲಾಗಳ ಭೆಟ್ಟಿಗೆ ತೆರಳಿದರು.ಲೇಂಡಿ ನಾಲಾ, ಬಳ್ಳಾರಿ ನಾಲಾ ಸೇರಿದಂತೆಇನ್ನಿತರ ಪ್ರದೇಶಗಳನ್ನು ಗಮನಿಸಿದ ಅವರುಅಲ್ಲಿಆಗಿರುವಅತಿಕ್ರಮನವನ್ನುಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಾಲಾ ಅತಿಕ್ರಮಣದಿಂದ ನೀರು ಸರಾಗವಾಗಿ ಹರಿದು ಹೋಗಲು ಆಗುತ್ತಿಲ್ಲ. ಇದರಿಂದರೃತರಿಗೆ ಅಷ್ಟೇ ಅಲ್ಲ ಕೆಲ ಮನೆಗಳಿಗೆ ನೀರು ನುದ್ದಿ ಜನಜೀವನ ಸ್ತವ್ಯಸ್ತಗೊಳ್ಳುತ್ತಿದೆ. ಆದ್ದರಿಂದ ಸಂಬಂಧಿಸಿದವರಿಗೆ ತಕ್ಷಣ ನೋಟೀಸ್‍ಕೊಟ್ಟುಅತಿಕ್ರಮಣತೆರವು ಮಾಡಬೇಕೆಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಸತತ ಮಳೆಯಿಂದ ಹಾನಿಗೊಳದ ಬೆಳೆಗಳಿಗೆ ಪರಿಹಾರಕೊಡುವಂತೆರೃತರು ಶಾಸಕರಿಗೆ ಮನವಿ ಮಾಡಿದರು.ಈ ಕುರಿತಂತೆ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೆಟ್ಟಿ ಮಾಡಿರೃತರಿಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿಕೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');