ಸೋಮವಾರದಿಂದ ಬೆಳಗಾವಿ ಬೀಗ ಓಪನ್: ಸಿಎಂ ಘೋಷಣೆ

ವೀಕೆಂಡ್ ಕರ್ಫ್ಯೂ ಶೇಕಡಾ 50 ಮಿತಿಯೊಂದಿಗೆ, ಏನಿರುತ್ತೆ? ಇರಲ್ಲ? ಇಲ್ಲಿದೆ ಮಾಹಿತಿ,

0

ಬೆಂಗಳೂರು: ಕೊರೋನಾರ್ಭಟ ಇಳಿಕೆಯಾದ ಜಿಲ್ಲೆಗಳಿಗೆ ಸಿಎಂ  ನಿರ್ಬಂಧ ಸಡಲಿಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಬೀಗ್ ಓಪನ್ ಆಗಿದೆ.

60 ದಿನಗಳ ಬಳಿಕ ಬೆಳಗಾವಿ ಯಥಾಸ್ಥಿತಿಗೆ ಮರಳಿದ್ದು, ಸೋಮವಾರದಿಂದ  ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಜಿಲ್ಲೆಗಳಿಗೆ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ.

ಏನಿರುತ್ತೆ? ಇರಲ್ಲ?

ಎಲ್ಲಾ ಅಂಗಡಿಗಳನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ

ಎಸಿ ಚಾಲನೆ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೊರೆಂಟ್ ಓಪನ್ -ಮದ್ಯಪಾನ ಹೊರತುಪಡಿಸಿ ಶೇಕಡ 50 ಸಾಮರ್ಥ್ಯದೊಂದಿಗೆ ಕುಳಿತು ತಿನ್ನಲು ಅವಕಾಶ

ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ

ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ

ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆ

ಸರ್ಕಾರಿ, ಖಾಸಗಿ ಕಚೇರಿ ಶೇಕಡ 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಣೆ

ಲಾಡ್ಜ್, ರೆಸಾರ್ಟ್ ಗಳಲ್ಲಿ ಶೇಕಡ 50 ಸಾಮರ್ಥ್ಯಕ್ಕೆ ಅವಕಾಶ

ಜಿಮ್ ಗಳಲ್ಲಿ ಎಸಿ ಇಲ್ಲದೇ ಶೇಕಡ 50 ಸಾಮರ್ಥ್ಯಕ್ಕೆ ಅವಕಾಶ

ಶೇಕಡ 5 ಕ್ಕಿಂತ ಪಾಸಿಟಿವಿಟಿದ ದರ ಜಾಸ್ತಿ ಇರುವ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ 11 -6 – 2021 ರ ಆದೇಶದ ಸಡಿಲಿಕೆ/ನಿರ್ಬಂಧ ಮುಂದುವರೆಯಲಿದೆ.

ಶೇಕಡ 10 ಕ್ಕಿಂತ ಹೆಚ್ಚು ಪಾಸಿಟಿವ್ ಇರುವ ಮೈಸೂರಿಲ್ಲಿ ನಿರ್ಬಂಧ ಯಥಾಸ್ಥಿತಿ ಇರಲಿದೆ.

ಸಂಜೆ 7 ರಿಂದ ಬೆಳಗ್ಗೆ 5 ಗಂಎವರೆಗೆ ನೈಟ್ ಕರ್ಫ್ಯೂ

ವಾರಾಂತ್ಯ ಕರ್ಫ್ಯೂ -ಶುಕ್ರವಾರದಿಂದ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ

ಶೇಕಡ 50 ಮಿತಿಯೊಂದಿಗೆ ಬಸ್ ಸಂಚಾರಕ್ಕೆ ಅವಕಾಶ

ನಿರ್ಬಂಧ:

ಈಜುಕೊಳ, ಸಭೆ ಸಮಾರಂಭ, ರಾಜಕೀಯ ಸಭೆ, ಕ್ರೀಡೆ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');