ಅಪ್ಪ ನಾ ಕಣ್ಣುಬಿಡುವ ಮೊದಲೇ ನೀ ಕಂಡೇ ನನ್ನ ಹೃದಯ ಮಿಡಿತ ! : ಕವನ ಸರಸ್ವತಿ ಪತ್ತಾರ್

0

 

ತಂದೆಯ ದಿನ  ಆಚರಣೆ ನಿಮಿತ್ಯ ಕವನ ಬರೆದ ಸರಸ್ವತಿ ಪತ್ತಾರ

 

ಅಪ್ಪ ನಾ ಕಣ್ಣುಬಿಡುವ ಮೊದಲೇ ನೀ ಕಂಡೇ ನನ್ನ ಹೃದಯ ಮಿಡಿತ !

ತಾಯಿಯ ಜೊತೆಗೂಡಿ
ಹಂಚಿಕೊಂಡೆ ನನ್ನ ಎತ್ತಿ ಆಡಿಸುವ ತವಕ !!

ತಾಯಿಯ ಗರ್ಭದಿಂದ ಬಂದೇ ನಾ ಅಳುತ್ತಾ !
ನಿನ್ನ ಕೈ ಸ್ಪರ್ಶದಿ ನಾ ನಿಂತೇ ಧೈರ್ಯದಿ ನಗುತ್ತಾ !!

ಹೇ ತಂದೆ ಜಗವ ತೋರಿದೆ ಹೆಗಲ ಮೇಲೆ ಹೊತ್ತು !
ನೀನೇ ಜಗತ್ತು ನನಗೆ ಈ ಹೊತ್ತು !!

ನನ್ನಲ್ಲಿ ನಿನ್ನ ತಾಯಿಯ ಕಂಡ ಮಹಾನುಭಾವ !
ನನ್ನ ಮೊದಲ ಮಗು ನೀನೇ.. ಇದು ನನ್ನ ಭಾವ !!

ತಿದ್ದಿ ತೀಡಿ ಬೆಳೆಸಿ ಜಗದ ಅರಿವು ಮೂಡಿಸಿದ ಜಾದೂಗಾರ !
ಕಲೆಯ ಬೆಲೆಯ ತಿಳಿಸಿ
ಕಲಾವಿದೆಯ ಮಾಡಿದ ಕಲೆಗಾರ !!

ಅಪರೂಪದಲಿ ಅಪರೂಪದ ವ್ಯಕ್ತಿತ್ವದ ತಂದೆ ನೀನು !
ನಿನ್ನಂತ ತಂದೆಯನ್ನು ಪಡೆದ ಧನ್ಯಳು ನಾನು !!

ಧನ್ಯತೆಯ ಭಾವದಲಿ ಮಿಂದೆದ್ದ ಈ ಜೀವ !
ಹತ್ತು ಜನ್ಮಗಳ ಪಡೆದರು ಮತ್ತೆ ಬರುವುದು ನಿಮ್ಮ ಮಗಳಾಗಿಯೇ ಈ ಜೀವ !!

ಲೇಖನ :  ಸರಸ್ವತಿ. ಪತ್ತಾರ

Happy father’s day 🙏🙏🙏🙏🙏🙏🌷🌷🌷🌷🌷🌷🎂🎂🎂🎂🎂🎂

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');