ಪುಸಲಾಯಿಸಿ ಅಪ್ರಾಪ್ತ ಯುವತಿ ಮೇಲೆ ಯುವಕ ಅತ್ಯಾಚಾರ: ಆರೋಪಿಯನ್ನ ಜೈಲಿಗೆ ಅಟ್ಟಿದ “ಖಾಕಿ”

0

ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣ ಸಮೀಪದ ಯುವತಿಯನ್ನು ಒತ್ತಾಯಪೂರ್ವಕವಾಗಿ ಮದುವೆಯಾಗಿ ಅತ್ಯಾಚಾರವೆಸಗಿದ ಆರೋಪದಡಿ ಯುವಕನೊಬ್ಬನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ತೀರ್ಥಹಳ್ಳಿ ತುಂಗಾ ಕಾಲೇಜಿನ ಸಮೀಪದ ವಾಸಿ ಕಮಲ್ ಆರೋಪಿ. ಕಾಲೇಜು ಒಂದರಲ್ಲಿ ಗೂರ್ಖ ಕೆಲಸ ಮಾಡಿಕೊಂಡು ಅನೇಕ ವರ್ಷಗಳಿಂದ ಇದ್ದ ಗಣೇಶ್ ಎಂಬುವರ ಮಗ ಕಮಲ್ ಜೂ.11ರಂದು ಅಪ್ರಾಪ್ತ ಯುವತಿಯೋರ್ವಳನ್ನು ಪುಸಲಾಯಿಸಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಬೆಳಗಿನ ಜಾವ ಬಲಾತ್ಕಾರವಾಗಿ ತಾಳಿ ಕಟ್ಟಿದ್ದಾನೆ.

ಬಳಿಕ ತೀರ್ಥಹಳ್ಳಿ ಪಟ್ಟಣದ ಆರಗ ರಸ್ತೆಯಲ್ಲಿ ಸುರಾನಿ ಸಮೀಪದ ಪರಿಚಯದವರ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿಯ ಪೋಷಕರು ಮತ್ತು ಯುವತಿ ದೂರು ನೀಡಿದ್ದಾರೆ. ಸುರಾನಿಯ ತೋಟದಲ್ಲಿ ಅಡಗಿದ್ದ ಕಮಲ್ ನನ್ನು ಪತ್ತೆ ಹಚ್ಚಿ ತೀರ್ಥಹಳ್ಳಿ ಪೊಲೀಸರು ಠಾಣೆಗೆ ಕರೆ ತಂದು ಯುವತಿಯ ದೂರಿನ ಮೇರೆಗೆ ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ಪೋಸ್ಕೋ ಕೇಸ್ ಹಾಕಲಾಗಿದೆ.

ಬಲಾತ್ಕಾರವಾಗಿ ಮದುವೆಯಾದ ಪ್ರಕರಣ,ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಈತನ ಮೇಲೆ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');