ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ; ಸಿದ್ದು ಪರ ಶಾಸಕ ಇಟ್ನಾಳ್‌ ಬ್ಯಾಟಿಂಗ್‌!

0

ಕೊಪ್ಪಳ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಮತ್ತೆ ನೋಡಬೇಕೆಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.  ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಇದಕ್ಕೆ ನನ್ನ ಬೆಂಬಲ ಕೂಡ ಇದೆ ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಇಟ್ನಾಳ್‌  ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್‌  ಬಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಜನ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇದು ಕೇವಲ ಜಮೀರ್ ಅಹ್ಮದ್ ಅಷ್ಟೇ ಅಲ್ಲ. ಎಲ್ಲಾ ಮುಖಂಡರ ಅಭಿಪ್ರಾಯವಾಗಿದೆ. ರಾಜ್ಯ ಸರಕಾರ ಪ್ರವಾಹ, ಕೊರೊನಾ ತಡೆಯಲು ವಿಫಲವಾಗಿದ್ದು, ಈ ವಿಫಲತೆಯಿಂದ ಜನ ಸಿದ್ದರಾಮಯ್ಯ ಪರ ಒಲವು ಹೊಂದಿದ್ದಾರೆ.

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ನೀಡಿರುವ ಯೋಜನೆಗಳಿಂದ ಜನರ ಬೆಂಬಲವಿದೆ. ಪಕ್ಷದ ಹಿತದೃಷ್ಠಿಯಿಂದ ಕೆಪಿಸಿಸಿ ಅಧ್ಯಕ್ಷರು ಸಾಮೂಹಿಕ ನಾಯಕತ್ವದ ಬಗ್ಗೆ ಹೇಳಿದ್ದಾರೆ. ನಾಯಕತ್ವ ಕುರಿತು ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವರಿಷ್ಠರ ನಿರ್ಧಾರವೇ ಅಂತಿಮ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದ್ದಾರೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');