ಕೃಷ್ಣಾ ನದಿಯಿಂದ ನೀರಿನ ಒಳಹರಿವು ಹೆಚ್ಚಳ: ನದಿ ತೀರದ ಜನತೆ ನಿದ್ದೆಗೆಡಸಿದ ಮಳೆರಾಯ

0

ಬೆಳಗಾವಿ:   ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ನದಿ ತೀರದ ಅಥಣಿ ತಾಲೂಕಿನ  ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಮಹಾರಾಷ್ಟ್ರ ರಾಜ್ಯದ ರಾಜಾಪುರ ಬ್ಯಾರೇಜ್ ನಿಂದ 1.3 ಲಕ್ಷ ಕ್ಯೂಸೆಕ್ ನೀರನ್ನು ಹಿಪ್ಪರಗಿ ಅಣೆಕಟ್ಟಿಗೆ ಹರಿದು ಬರುತ್ತಿರುವ ಕಾರಣ, ಅಷ್ಟೇ ಪ್ರಮಾಣದ ನೀರನ್ನು ಕೆಳಭಾಗ ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗಿದೆ. ಸದ್ಯದ ಮಟ್ಟಿಗೆ ನದಿ ಒಡಲಿನಲ್ಲಿ ಹರಿಯುತ್ತಿದ್ದರೂ ಪ್ರತಿ ವರ್ಷಗಳ ಕಾಲ ಕೃಷ್ಣಾ ನದಿ ಪ್ರವಾಹದಿಂದ ರೈತರು ಈ ಬಾರಿಯು ಆತಂಕಕ್ಕೆ ದೂಡಿದೆ.

ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗುತ್ತಿದ್ದಂತೆ ಅಥಣಿ ತಾಲೂಕಿನ ಜನವಾಡ ಹಾಗೂ ಸವದಿ ಗ್ರಾಮಗಳ ನದಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಮಣ್ಣು ಕೊರತೆ ಪ್ರಾರಂಭವಾಗಿದ್ದು ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ನದಿಯಲ್ಲಿ ನೀರಿಮಟ್ಟ ಹೆಚ್ಚಳದಿಂದ ಹಲವು ರೈತರ ನೀರಾವರಿ ಮೋಟಾರ್ ಗಳು ಮುಳಗಿದರಿಂದ ರೈತರಿಗೆ ನಷ್ಟ ಸಂಭವಿಸಿದೆ. ಹಾಗೂ ಕೆಲವು ಕಬ್ಬಿನ ಗದ್ದೆಗಳಿಗೆ ನದಿ ನೀರು ಹೊಕ್ಕಿದ್ದು ಮತ್ತೆ ಅಥಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಹಲವಾರು ವರ್ಷಗಳಿಂದ ಕೃಷ್ಣ ನದಿ ಪ್ರವಾಹ ಹಾಗೂ ಬೇಸಿಗೆ ಸಂದರ್ಭದಲ್ಲಿ ನೀರು ಬತ್ತಿ ರೈತರಿಗೆ ತೊಂದರೆ ಉಂಟಾಗುತ್ತಿದೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು, ಮತ್ತು ಅಥಣಿ ತಾಲೂಕಿನಲ್ಲಿ ಕೆಲವು ಕಡೆ ನೀರಿನ ರಭಸಕ್ಕೆ ಜಮೀನು ಕೊರೆತ ಆಗುತ್ತಿರುವುದರಿಂದ ಹಿಪ್ಪರಗಿ ಅಣೆಕಟ್ಟು ಕೆಳಭಾಗದ ನದಿ ಪಕ್ಕದಲ್ಲಿ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದರು.

ಅಣೆಕಟ್ಟಿನಿಂದ ಯಾವ ಪ್ರಮಾಣ ನೀರು ಬಿಡುಗಡೆ ಆಗುತ್ತಿದೆ ಎಂಬುದು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಿದರೆ ನಮ್ಮ ಕೃಷಿ ಪಂಪ್ಸೆಟ್ ಸುರಕ್ಷಿತವಾಗಿ ರಕ್ಷಿಸಿಕೊಳ್ಳಬಹುದು ಅನೇಕಟ್ಟು ಅಧಿಕಾರಿಗಳು ಯಾವ ಪ್ರಮಾಣದ ನದಿಗೆ ನೀರು ಬರುತ್ತಿದೆ ಎಂಬುದು ಪಂಚಾಯಿತಿ ಮುಖಾಂತರ ಗ್ರಾಮಸ್ಥರಿಗೆ ತಿಳಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');