ಶೈಕ್ಷಣಿಕ ವಲಯದಲ್ಲಿ ಕೋವಿಡ್ ಪೂರ್ವದಲ್ಲೇ ಸಾಕಷ್ಟು ಸಮಸ್ಯೆ : ಡಾ.ಪಿ.ವಿ.ನಿರಂಜನಾರಾಧ್ಯ

0

ಬೆಂಗಳೂರು : ಶೈಕ್ಷಣಿಕವಾಗಿ ಕೋವಿಡ್ ನಿಂದ ಮಾತ್ರ ಬಿಕ್ಕಟ್ಟು ಬಂದಿಲ್ಲ. ಕೋವಿಡ್ ಪೂರ್ವದಲ್ಲೇ ಸಾಕಷ್ಟು ಸಮಸ್ಯೆಗಳು ಪ್ರಾಥಮಿಕ ಮತ್ತು ಪ್ರೌಢ ಶೈಕ್ಷಣಿಕ ವಲಯದಲ್ಲಿದ್ದವು ಎಂದು ರಾಷ್ಟ್ರೀಯ ಕಾನೂನು ಶಾಲೆಯ ಶಿಕ್ಷಣ ತಜ್ಞ ಡಾ.ಪಿ.ವಿ.ನಿರಂಜನಾರಾಧ್ಯ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ 10 ದಿನಗಳ ವೆಬಿನಾರ್ ಸರಣಿಯ 10ನೇ ದಿನದ “ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು” ವಿಷಯ ಮಂಡಿಸಿ ಮಾತಾಡಿದರು.

ಕೋವಿಡ್ ನಂತರ ಶೈಕ್ಷಣಿಕ ಸಮಸ್ಯೆಗಳು ದುಪ್ಪಟ್ಟಾಗಿವೆ. ಶಿಕ್ಷಣದಲ್ಲಿ ದೊಡ್ಡ ಮಟ್ಟದ ಅಸಮಾನತೆ. ಶಿಕ್ಷಣ ಸಾಮಾಜಿಕ ನ್ಯಾಯದ ಬಹುದೊಡ್ಡ ಅಸ್ತ್ರವಾಗಬೇಕು ಎಂಬ ಆಶಯವನ್ನು ಸಂವಿಧಾನದ ಅಡಿಯಲ್ಲಿ ಹೊಂದಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ ಎಂದರು.

ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗ, ಭೌಗೋಳಿಕ, ಶೈಕ್ಷಣಿಕ ಪಠ್ಯಕ್ರಮದಲ್ಲೇ ದೊಡ್ಡ ಅಸಮಾನತೆ ಇದೆ. ಶಿಕ್ಷಣದಲ್ಲಿ 7-8 ಬಗೆಯ ಶಾಲೆಗಳನ್ನ ಕಟ್ಟಲಾಗಿದೆ. ಉದಾ: ಅಂತರರಾಷ್ಟ್ರೀಯ ಶಾಲೆಗಳು, ಸಿಬಿ.ಎಸ್.ಇ, ಐಸಿಎಸ್.ಇ ಶಾಲೆಗಳು, ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಚೋಟಾಮೋಟಾ ಶಾಲೆಗಳು, ಮೀಡಿಯೋಕರ್ ಶಾಲೆಗಳು, ಸರ್ಕಾರಿ ಶಾಲೆಗಳು ಇತ್ಯಾದಿ ಶಾಲೆಗಳನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಒಂದು ರೀತಿಯಲ್ಲಿ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೇವೆ ಎಂದರು.

15 ತಿಂಗಳು ಶಾಲೆಗಳನ್ನು ಮುಚ್ಚಿದ್ದರಿಂದ ಪೌಷ್ಠಿಕತೆಯ ಸಮಸ್ಯೆ ದೊಡ್ಡಮಟ್ಟದಲ್ಲಿ ಆಗಿದೆ.  ಬಹುತೇಕ ವಿದ್ಯಾರ್ಥಿಗಳು ಬಿಸಿಹಾಲು, ಬಿಸಿಯೂಟ ಸೇವಿಸುತ್ತಿದ್ದರು. ಆದರೆ ಶಾಲೆ ಬಂದ್ ಆದ ನಂತರ ಪೌಷ್ಠಿಕತೆಯ ಕೊರತೆಯ ಯಾತನೆಯನ್ನು ಅನುಭವಿಸಬೇಕಾಯಿತು. ಸರ್ಕಾರ ಡ್ರೈ ರೇಷನ್ ಕೊಟ್ಟಿದೆ. ಆದರೆ ವಿತರಣೆಯ ಸಮಸ್ಯೆ ಇದೆ. ಬಿಸಿಯೂಟ ಕೊಟ್ಟಂತೆ ಆಗುವುದಿಲ್ಲ. ಬಿಸಿಯೂಟ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಜಾರಿಗೆ ಬಂದಿದ್ದು, ಪೌಷ್ಠಿಕಾಂಶವನ್ನು ಕೊಡಬೇಕು ಎಂದೇ ಜಾರಿಯಾಗಿದ್ದು ಎಂದರು.

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆದರು ಎನ್ನುವಂತೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ವೈಜ್ಞಾನಿಕವಾಗಿ ವರದಿ ಮಾಡಿರುವ ಅಧ್ಯಯನಕಾರರು ಸಾಕಷ್ಟು ಜನ ಇದ್ದಾರೆ. ಅವರ ಫಲಿತಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಆಡಳಿತ, ನಮ್ಮ ಸರ್ಕಾರ, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಸೋತಿದ್ದಾರೆ. ಈ ಪರಿಹಾರದ ಮಾರ್ಗಗಳನ್ನು ಜಾರಿಗೆ ತರುವುದು ಹೇಗೆ ಎಂದು ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಿದೆ. ಇದು ಯಾರೊಬ್ಬರಿಗೆ ಸೀಮಿತವಲ್ಲ ಎಂದರು.

ವೆಬಿನಾರ್ ಅನ್ನು ಮಾನವ ಬಂಧುತ್ವ ವೇದಿಕೆ  – ಕರ್ನಾಟಕದ ಘಟಕ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಚಾಲಕ ತೋಳಿ ಭರಮಣ್ಣ ನಿರ್ವಹಿಸಿದರು.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');