ಬೆಳಗಾವಿಯಲ್ಲಿ 201 ಮಂದಿಗೆ ಕೊರೊನಾ ಸೋಂಕು : ಓರ್ವ ಸಾವು, ಚಿಕ್ಕೋಡಿಯಲ್ಲಿ ಹೆಚ್ಚು ಕೋವಿಡ್ ಪತ್ತೆ

0

ಬೆಳಗಾವಿ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರ್ನಾಲ್ಕು ದಿನಗಳಿಂದ ಏರಿಳಿತವಾಗುತ್ತಿದ್ದು , ಭಾನುವಾರ 201 ಜನರಲ್ಲಿ ವೈರಸ್ ಪತ್ತೆಯಾಗಿದೆ.

ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ, 201 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಬ್ಬರು  ವೈರಸ್ ಗೆ ಬಲಿಯಾಗಿದ್ದಾರೆ. ಚಿಕ್ಕೋಡಿ ಯಲ್ಲಿಂದು ಹೆಚ್ಚು ಜನರಿಗೆ ಸೋಂಕು ತಗುಲಿದೆ‌.

ಕಳೆದ ಮೂರ್ನಾಲ್ಕು ದಿನಗಳಿಗೆ ಹೋಲಿಸಿದಾಗ ಸಾವಿನ ಸಂಖ್ಯೆಯೂ ದಹ ಇಳಿಮುಖವಾಗಿದೆ. ನಿನ್ನೆ 6 ಜನರು ಮೃತಪಟ್ಟಿದ್ದರು.  222 ಜನರಿಗೆ ಸೋಂಕು ವಕ್ಕರಿಸಿತ್ತು. ಆದರೆ ಇಂದು ಎರಡರಲ್ಲೂ ಕಡಿಮೆಯಾಗಿದೆ.

ಅಥಣಿ-20, ಬೆಳಗಾವಿ-41, ಬೈಲಹೊಂಗಲ-06, ಚಿಕ್ಕೋಡಿ-108,‌ ಗೋಕಾಕ-6 , ಹುಕ್ಕೇರಿ-09, ಖಾನಾಪುರ-3, ರಾಮದುರ್ಗ-02, ರಾಯಬಾಗ-01, ಸವದತ್ತಿ-05 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');