ಕದ್ದ 50 ಮೊಬೈಲ್ ಗಳ ಮಾರಾಟ : ಓರ್ವನ ಬಂಧನ,

0

ಹಾವೇರಿ : ಕಳ್ಳತನ ಮಾಡಿದ ಪೋನ್ ಗಳನ್ನು ಮಾರಾಟ ಮಾಡುತ್ತಿದ್ದ ಖದೀಮರಿಬ್ಬರಲ್ಲಿ ಓರ್ವನನ್ನು ಆಡೂರು ಪೊಲೀಸರು ಬಂಧಿಸಿದ್ದು, ಅವರಲ್ಲಿದ್ದ ಮೊಬೈಲ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಹುಲಗಿನಕೊಪ್ಪ ಗ್ರಾಮದ ನಿತೀನ್ ಆನಂದ ಗೌಂಡಿ, ಬಂಧಿತ. ಮದು ಈರಪ್ಪ ಕರೇಕ್ಯಾತನಹಳ್ಳಿ ಪರಾರಿಯಾಗಿದ್ದು, ಆತನಿಗೆ ಬಲೆ ಬಿಸಿದ್ದಾರೆ.

ಜೂನ್.20 ರಂದು ತಿಳವಳ್ಳಿ ಗ್ರಾಮದ ಹರ್ಡೇಕರ ವೃತ್ತದ ಸಮೀಪ ಇಬ್ಬರು ಮೊಬೈಲ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆ ಆಡೂರು ಪೊಲೀಸರು ದಾಳಿ ನಡೆಸಿ, ಅವರಲ್ಲಿದ್ದ ಸುಮಾರು 2 ಲಕ್ಷ ಮೌಲ್ಯದ 50 ಪೋನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ  ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಖದೀಮರ ಬಳಿ ಇರುವ ಪೋನ್ ಗಳಿಗೆ ಯಾವುದೇ ದಾಖಲೆಗಳಿಲ್ಲ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಎಂ ಸಂತೋಷ ಹಾಗೂ ಶಿಗ್ಗಾವಿ ಡಿ ವೈ ಎಸ್ ಪಿ ಓ.ಬಿ.ಕಲ್ಲೇಶಪ್ಪ, ಹಾನಗಲ್ಲ ಸಿಪಿಐ ಶಿವಶಂಕರ ಗಣಾಚಾರಿ ಮಾರ್ಗದರ್ಶನದಲ್ಲಿ ಆಡೂರು ಪಿಎಸ್ಐ ನೀಲಪ್ಪ ನರಲಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎನ್.ಕೆ.ನಿಂಗನಹಳ್ಳಿ, ಎ.ಎಸ್.ಐ.ಜೆ.ಸಿ.ರಾಠೋಡ, ಎಸ್.ಎಂ.ಕಂಬಳಿ, ಎಂ.ಎಂ.ಮಾದರ, ಎಸ್.ಜಿ.ಸೋಮಸಾಗರ ಹಾಗೂ ಬಿ.ಎಚ್.ಗೋಡಿಹಾಳ ದಾಳಿ ಮಾಡಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');