ಸಾರಿಗೆ ವಿಭಾಗಕ್ಕೆ 45 ಕೋಟಿ ರೂ ನಷ್ಟ: ಮಹಾದೇವಪ್ಪ ಮುಂಜಿ

0

ಬೆಳಗಾವಿ: ಕೊರೋನಾದಿಂದ 52 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಸೋಮವಾದಿಂದ ಆರಂಭವಾಗಿವೆ. ಆದರೆ, ಲಾಕ್ ಡೌನ್ ದಿಂದ ಬೆಳಗಾವಿ ಸಾರಿಗೆ ವಿಭಾಗಕ್ಕೆ ಸುಮಾರು  45 ಕೋಟಿ ರೂ. ನಷ್ಟವಾಗಿದೆ ಎಂದು ಕೆಎಸ್ ಆರ್ ಟಿಸಿ ಡಿಸಿ ಮಹಾದೇವಪ್ಪ ಮುಂಜಿ ಹೇಳಿದ್ದಾರೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸರ್ಕಾರದ ನಿಯಮದಂತೆ ಇಂದಿನಿಂದ ಬಸ್‌ಗಳ ಸಂಚಾರ ಕಾರ್ಯಾರಂಭವಾಗಲಿದೆ.‌ ಪ್ರತಿ ರೂಟ್‌ಗೆ ಐದೈದು ವಾಹನಗಳ ಕಾರ್ಯಾಚರಣೆ ಆರಂಭಿಸಲಾಗುತ್ತಿವೆ. ಕೋವಿಡ್ ನಿಯಮ ಪ್ರಕಾರ ಬಸ್‌ಗಳ ಸ್ಯಾನಿಟೈಸೇಷನ್ ಮಾಡಲಾಗುತ್ತೆ ಎಂದು ತಿಳಿಸಿದರು. ‌

ಬಸ್‌ಗಳಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತಿದೆ.‌ ದೂರದ ಊರುಗಳಿಗೆ ಸಂಜೆ 7 ಗಂಟೆಯವರೆಗೆ ಬಸ್‌ಗಳ ಸಂಚಾರ ವ್ಯವಸ್ಥೆ ಇರಲಿದೆ.‌ ಸಂಜೆ 7 ಗಂಟೆ ಬಳಿಕ ಬಸ್‌ಗಳ ಕಾರ್ಯಾಚರಣೆ ಸ್ಥಗಿತ ವಾಗಲಿದೆ ಎಂದು ಹೇಳಿದರು. ‌

3150 ಸಾರಿಗೆ ಸಿಬ್ಬಂದಿಗೆ ಮೊದಲ ಹಂತದ ಕೋವಿಡ್ ವ್ಯಾಕ್ಸಿನೇಷನ್‌  ನೀಡಲಾಗಿದೆ.‌ ಸದ್ಯಕ್ಕೆ ಮಹಾರಾಷ್ಟ್ರ, ಗೋವಾಗೆ ಬಸ್‌ಗಳ ಸಂಚಾರ ಇಲ್ಲ.‌ ಸರ್ಕಾರ ನಿರ್ದೇಶನ ನೀಡಿದ್ರೆ ಮಹಾರಾಷ್ಟ್ರ, ಗೋವಾಗಳಿಗೆ  ಬಸ್‌ಗಳ ಸಂಚಾರ ಪ್ರಾರಂಭಿಸಲಾಗುತ್ತದೆ ಎಂದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');