ರೋಹಿಣಿ ಸಿಂದೂರಿಗೆ ತಪ್ಪದ ಸಂಕಷ್ಟ

0

ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ವರ್ಗಾವಣೆಯಾದರೂ ಸಹ ಸಂಕಷ್ಟ ತಪ್ಪುತ್ತಿಲ್ಲ. ಇದೀಗ ಜಿಲ್ಲಾಧಿಕಾರಿ ನಿವಾಸ ಅನಧಿಕೃತ ನವೀಕರಣ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ಕಂದಾಯ ಇಲಾಖೆ ನಿರ್ದೇಶನ ನೀಡಿದೆ.

ಪ್ರಾದೇಶಿಕ ಆಯುಕ್ತರಿಗೆ 7 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶ‌ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸ, ಜಲಸನ್ನಿಧಿ ಪಾರಂಪರಿಕ ಕಟ್ಟಡವನ್ನು ಅನಧಿಕೃತವಾಗಿ ನವೀಕರಿಸಿರೋ ಆರೋಪ ರೋಹಿಣಿ ಸಿಂಧೂರಿ ಮೇಲೆ ಇದೆ.

ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವಧಿಯಲ್ಲಿ ನೆಲಹಾಸು ನವೀಕರಣ ನಡೆದಿತ್ತು. ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೇ ನೆಲಹಾಸು ನವೀಕರಣಕ್ಕೆ 16.50 ಲಕ್ಷ ಖರ್ಚು ಮಾಡಿರುವ ಆರೋಪ ಇದೆ.

ಶಾಸಕ ಸಾ.ರಾ. ಮಹೇಶ್ ದೂರು ಆಧರಿಸಿ ತನಿಖೆಗೆ ಆದೇಶ ನೀಡಲಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ಬಂದಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');