ಸಸಿ ನೆಟ್ಟು ಶಾಲೆ ಪ್ರಾರಂಭೊತ್ಸವ

0
ಶಾಲಾ ಪ್ರಾರಂಭೋತ್ಸವವನ್ನು ಗಿಡ ನೆಡುವ ಮೂಲಕ ಪರಿಸರ ಜಾಗೃತಿಯೊಂದಿಗೆ  ಜಿ.ಎ.ಖೋತ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥಣಿ ಇವರು ಇಂದು ಕೆ ಎಲ್ ಇ ಸಂಸ್ಥೆಯ ಸಿ ಎಸ್ ಕಿತ್ತೂರ ಹೈಸ್ಕೂಲ್‌ ಅಥಣಿ ಇಲ್ಲಿ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ  ಮುಖ್ಯಾಧ್ಯಾಪಕರಾದ ಎಸ್ ಜಿ ಸಲಗರೆ ಜಗತ್ತಿನಲ್ಲಿ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣ ಮನುಷ್ಯ ಗಿಡಮರಗಳನ್ನು ಕಡಿದು ವಾತಾವರಣದ ಸಮತೊಲನ ಹಾಳು ಮಾಡುತ್ತಿರುವದೆ ಆಗಿದೆ.ಮನೆಗೊಂದು ಮರ ಊರಿಗೊಂದು ವನ ಅನ್ನುವದು
ಹಳೆಯ ಕಾಲದ ಗಾದೆ ಮಾತಾಗಿದೆ.ಸದ್ಯ ಮಳೆ ಮತ್ತು ಬೆಳೆ ಚೆನ್ನಾಗಿ ಬರಲು ಮತ್ತು ಆಕ್ಸಿಜನ್ ಕೊರತೆ ಆಗದಂತೆ ಕಾಪಾಡಲು ಸಸಿಗಳನ್ನು ನೆಟ್ಟು ಮರವಾಗಿಸುವ ಕೆಲಸ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಿದೆ ಎಂದರು. ಈ ವೇಳೆ ಸಿ ಎಸ್ ಕಿತ್ತೂರ ಹೈಸ್ಕೂಲಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');