ಅಥಣಿ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ ಕೊಟ್ಟ ಶಾಸಕ ಮಹೇಶ ಕುಮಠಳ್ಳಿ

0
ಅಥಣಿ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ ಕೊಟ್ಟ ಶಾಸಕ ಮಹೇಶ ಕುಮಠಳ್ಳಿ
ಅಥಣಿ: ಶಾಸಕ ಮಹೇಶ ಕುಮಠಳ್ಳಿ ಅವರು ಎಚ್ ವಿಶ್ವನಾಥ ಅವರ ಸಹಕಾರದೊಂದಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಐದು ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನಗಳನ್ನು ಇಂದು ವಿತರಣೆ ಮಾಡಿದರು.ಈ ವೇಳೆ ಆಕ್ಸಿಜನ್ ಕಾನ್ಸಂಟ್ರೇಟ್ ಹಸ್ತಾಂತರ ಮಾಡಿ ಮಾತನಾಡಿದ ಅವರು ಜೀವವಿದ್ದರೆ ಮಾತ್ರ ಜಿವನ ಈಗಾಗಲೇ ಅಥಣಿ ತಾಲೂಕು ಆಸ್ಪತ್ರೆಗೆ ಡಿಸಿಎಮ್ ಲಕ್ಷ್ಮಣ ಸವದಿ ಅವರು ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಅಲ್ಲದೆ ಖಾಸಗಿ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ ಮಾಡುತ್ತಿದ್ದು ಕೊರೊನಾ
 ಸೊಂಕಿತರಿಗೆ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದಾರೆ.ಖಾಸಗಿ ಆಸ್ಪತ್ರೆಗಳು ಕೂಡ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಚಿಕಿತ್ಸೆ ನೀಡಿ ಸಹಕರಿಸಿವೆ ಆದ್ದರಿಂದ ಅಥಣಿ ಪಟ್ಟಣದ ಐದು ಖಾಸಗಿ ಆಸ್ಪತ್ರೆಗಳಿಗೂ ಅಭಿನಂದನಾಪುರ್ವಕವಾಗಿ ಆಕ್ಸಿಜನ್ ಕಾನ್ಸಂಟ್ರೇಟ್ ಮಷೀನ್ ಉಡುಗೊರೆ ಆಗಿ ಕೊಡಲು ನಿರ್ಧರಿಸಿದ್ದು ಒಂದು ವಾರದಲ್ಲಿ ಬರಲಿವೆ ಎಂದರು.ಈ ವೇಳೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ,ತಾಲೂಕು ಪಂಚಾಯತಿ ಅಧಿಕಾರಿ ರವಿ ಬಂಗಾರಪ್ಪನವರ,ಉಪತಹಶಿಲ್ದಾರ ಮಹದೇವ ಬಿರಾದಾರ, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಬಸಗೌಡ ಕಾಗೆ, ಸಿಎಮ್ ಓ ಎಚ್.ಜಿ.ಕನಮಡಿ,ಡಾಕ್ಟರ್ ಸಿ ಎಸ್ ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');