ಯಡಿಯೂರಪ್ಪ ಪ್ರಶ್ನಾತಿತ ನಾಯಕರು 2023 ನಮ್ಮದೆ ಸರ್ಕಾರ; ಅಥಣಿ ಶಾಸಕ ಮಹೇಶ ಕುಮಠಳ್ಳಿ

0
ಅಥಣಿ: ರಾಜ್ಯ ರಾಜಕೀಯದಲ್ಲಿ  ಇತ್ತೀಚಿಗೆ ದಿನಗಳಲ್ಲಿ ಬಹಳಷ್ಟು  ಬೆಳವಣಿಗಳು ನಡೆಯುತ್ತಿವೆ ಆದರೆ ನಾನು ರಮೇಶ ಜಾರಕಿಹೋಳಿ ಅವರ ಜೊತೆಗೆ  ಮುಂಬೈಗೆ ಹೋಗಿಲ್ಲ ನಾನು ನನ್ನ ಕ್ಷೇತ್ರದಲ್ಲಿ ಇದ್ದೆನೆ ಎಂದು ರಮೇಶ ಕಾರಕಿಹೊಳಿ ಅವರನ್ನ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ ಅವರು ರಮೇಶ ಜಾರಕಿಹೊಳಿ ಜೊತೆಗೆ ನಾನು  ದೆಹಲಿಗೆ ಅಥವಾ ಮುಂಬೈಗೆ  ಹೋಗಿಲ್ಲ ನಾನು ನನ್ನ ಕ್ಷೇತ್ರದಲ್ಲಿ ಇದ್ದೇನೆ ಆದ್ದರಿಂದ  ಮಾಧ್ಯಮಗಳಿಗೆ ಕೈ ಮುಗಿದು ವಿನಂತಿ ಮಾಡುತ್ತೇನೆ.
ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ. ನಾನು ನನ್ನ ಕ್ಷೇತ್ರದಲ್ಲಿ ಇರುವಂತೆ ಉಳಿದವರೂ ಇರಬಹುದು. ರಮೇಶ ಜಾರಕಿಹೋಳಿ ಅವರು  ರಾಜಿನಾಮೆ ಬಗ್ಗೆ ಎಲ್ಲಿಯೂ ಹೇಳಿಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವದಂತಿ ಸುಳ್ಳು ಮುಖ್ಯಮಂತ್ರಿ   ಬಿಎಸ್ ವೈ 2023 ವರೆಗೂ ಸಿ ಎಂ ಆಗಿ ಮುಂದುವರೆಯುತ್ತಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಶ್ವರಪ್ಪ ಅವರು ಹಿರಿಯರು
ಯಡಿಯೂರಪ್ಪನವರ  ಜೊತೆಗೆ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದ ನಮ್ಮನ್ನು  ಬಹಳ ಗೌರವದಿಂದ ಕಂಡಿದ್ದಾರೆ ಅವರ ಬಗ್ಗೆ ಎರಡು ಮಾತಿಲ್ಲ.ರಾಜ್ಯದಲ್ಲಿ ಬಿಎಸ್ ವೈ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ.ಬರಗಾಲ, ಪ್ರವಾಹ,ಕೊರೊನಾ ಸೇರಿದಂತೆ ಹಲವು ಸಮಸ್ಯೆಗಳನ್ನು ನಿಭಾಯಿಸಿದ್ದಾರೆ ಬಂದಂತ ಹದಿನೇಳು ಜನರಿಗೆ ರಾಜ್ಯದ ಅಧ್ಯಕ್ಷ ನಳೀನಕುಮಾರ ಕಟೀಲ,ಯಡಿಯೂರಪ್ಪ,
ಬಿ ಎಲ್ ಸಂತೋಷ,ಜಗದೀಶ ಶೆಟ್ಟರ,ಮತ್ತು ಡಿಸಿಎಂ ಲಕ್ಷ್ಮಣ ಸವದಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜವಾಬ್ದಾರಿಗಳನ್ನು ನೀಡಿದ್ದಾರೆ ಹೈ ಕಮಾಂಡ್ ನೀರ್ಣಯಕ್ಕೆ ಬಿಎಸ್ ವೈ ಸೇರಿದಂತೆ ಎಲ್ಲರೂ ಬದ್ದರಾಗಿದ್ದೇವೆ ಯಡಿಯೂರಪ್ಪ ಪಕ್ಷಾತೀತ ನಾಯಕರು ಮುಂದೆ 2023 ರಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸುತ್ತೇವೆ ಆವಾಗಲೂ ನಮ್ಮದೆ ಸರ್ಕಾರ ಆಡಳಿತಕ್ಕೆ ಬರುತ್ತದೆ.ಪಕ್ಷದಲ್ಲಿ ಹೈಕಮಾಂಡ್ ಮತ್ತು ವರಿಷ್ಠರ ತೀರ್ಮಾನವೇ ಅಂತಿಮ ಅದಕ್ಕೆ ನಾವು ಬದ್ದರಿದ್ದೇವೆ. ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಭಾರತೀಯ ಜನತಾ ಪಕ್ಷದಲ್ಲಿ ಯಡಿಯೂರಪ್ಪ ಅವರೊಂದಿಗೆ ನಾವಿದ್ದೇವೆ ಎಂದು  ಹೇಳಿದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');