ಶಾಸಕ ಮಹೇಶ ಕುಮಠಳ್ಳಿ ವ್ಯಾಕ್ಸಿನ್ ಜಾಗೃತಿ

0
ಕೇಂದ್ರ ಸರ್ಕಾರ ಇಂದಿನಿಂದ ದೇಶದ ಎಲ್ಲ ಜನತೆಗೆ ಕೊರೊನಾ ತಡೆಗಟ್ಟಲು ವ್ಯಾಕ್ಸಿನ್ ನೀಡುತ್ತಿದ್ದು ರಾಜ್ಯದಲ್ಲಿಯೂ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೊರೊನಾ ತಡೆಗಟ್ಟಲು ವ್ಯಾಕ್ಸಿನ್ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಸ್ವಗೃಹದಿಂದ ಪಾದಯಾತ್ರೆ ಮೂಲಕ ಅಥಣಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸಿದರು.ಅಥಣಿ ಪಟ್ಟಣದ ಆರ್ ಎಚ್ ಕುಲಕರ್ಣಿ ಸಭಾಭವನಕ್ಕೆ ಭೇಟಿ ನೀಡಿದ ಅವರು ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರಲ್ಲದೆ  ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ ಕಡ್ಡಾಯವಾಗಿ ಧರಿಸಿಕೊಂಡು ಬಂದವರಿಗೆ ವ್ಯಾಕ್ಸಿನ್ ನೀಡುವಂತೆ ಸೂಚಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೋವಿಡ್ ವ್ಯಾಕ್ಸಿನ್ ಕುರಿತಾಗಿ ಹಲವಾರು ಕಡೆ ಕೆಲವರು ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿದ್ದರಿಂದ ಜನರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕಿದ್ದಾರೆ.ನಾನು ಸ್ವತಃ ಎರಡುಬಾರಿ ಕೊರೊನಾ ಪಾಜಿಟಿವ್ ಆಗಿದ್ದೇನೆ ಆದರೆ ಈಗಾಗಲೇ ಎರಡು ಡೋಸ್ ಪಡೆದಿರುವದರಿಂದ ಕೊರೊನಾ ವ್ಯತಿರಿಕ್ತವಾಗಿ ಪರಿಣಾಮ ಬೀರಲು ಆಗಲಿಲ್ಲ.ಕೊರೊನಾ ವಿರುದ್ದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನ್ ಸಹಕಾರಿ ಆಗಿದೆ.
ದೇಶದ ಪ್ರಧಾನಿ ಮೋದಿ ಅವರು ಇಂದಿನಿಂದ ದೇಶದ ಎಲ್ಲ ಜನರಿಗೂ ವ್ಯಾಕ್ಸಿನ್ ಉಚಿತವಾಗಿ ಸಿಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಯಾರು ಕೂಡ ಹಿಂದೇಟು ಹಾಕದೆ ಕೊರೊನಾ ಹರಡುವಿಕೆಯನ್ನು ತಡೆಯಲು ಸಹಕರಿಸಬೇಕು ಎಂದರು.ಈ ವೇಳೆ.ಅನೀಲ ಸೌದಾಗರ ,ಶಶಿಕಾಂತ ಸಾಳವೆ, ಸಂಜು ಕುಟ್ಟಕೋಳ್ಳಿ ,ಮಲಿಕಾರ್ಜುನ ಅಂದಾನಿ,
ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');