ಗ್ರಾಮೀಣ ಭಾಗದಲ್ಲಿ ವ್ಯಾಕ್ಸಿನ್ ಪ್ರಕ್ರಿಯೆ ಆರಂಭ

0

ಗ್ರಾಮೀಣ ಭಾಗದಲ್ಲಿ ವ್ಯಾಕ್ಸಿನ್ ಪ್ರಕ್ರಿಯೆ ಆರಂಭ

ಅಥಣಿ ತಾಲೂಕಿನ ಸತ್ತಿ, ಸವದಿ,ನಂದಗಾಂವ ಗ್ರಾಮಗಳಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶ್ ಕುಮಾರ ಅವರ ನೇತೃತ್ವದಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ಅಥಣಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಸಹಾಯದೊಂದಿಗೆ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಜರುಗಿತು.
ಸರ್ಕಾರ ನಿಗದಿ ಪಡಿಸಿದ ಆದ್ಯತಾಪಟ್ಟಿಯಲ್ಲಿ ಇರುವ ಪ್ರಂಟ್ ಲೈನ್ ವರ್ಕರ್ ಗಳು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಗ್ಯಾಸ್ ವಿತರಕರು,ಆಟೋ ಚಾಲಕರು,ಕೆ ಎಸ್ ಆರ್ ಟಿ ಸಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು,ಪಡಿತರ ವಿತರಣೆ ಮಾಡುವ ಅಂಗಡಿಯವರು,ಹಮಾಲರು,ಮತ್ತು ಅವರ ಕುಟುಂಬ ಸದಸ್ಯರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವದರಿಂದ ಕೊರೊನಾ ನಮ್ಮ ದೆಹಕ್ಕೆ ಹೆಚ್ಚಿನ ಹಾನಿ ಮಾಡುವದನ್ನು ತಡೆಯಬಹುದಾಗಿದೆ.ಎಂದರು ಈ ವೇಳೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ,ತಾಲೂಕು ಪಂಚಾಯತಿ ಅಧಿಕಾರಿ ರವಿ ಬಂಗಾರಪ್ಪನವರ,
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣ ಪಾಟೀಲ, ಉಪತಹಶಿಲ್ದಾರ ಮಹದೇವ ಬಿರಾದಾರ,ಸೇರಿದಂತೆ ಹಲವರು ಉಪಸ್ಥಿತರಿದ್ದರು////

ಸಂಕೋನಟ್ಟಿ ಗ್ರಾಮೀಣ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಪ್ರಕ್ರಿಯೆ ಆರಂಭ

ಅಥಣಿ ತಾಲೂಕಿನ ಸಂಕೋನಟ್ಟಿ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ಅಥಣಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಸಹಾಯದೊಂದಿಗೆ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಜರುಗಿತು.ಈ ವೇಳೆ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಭಾಸ ಹುಬ್ಬಳ್ಳಿ ಮಾತನಾಡಿ ಸರ್ಕಾರ ನಿಗದಿ ಪಡಿಸಿದ ಆದ್ಯತಾಪಟ್ಟಿಯಲ್ಲಿ ಇರುವ ಪ್ರಂಟ್ ಲೈನ್ ವರ್ಕರ್ ಗಳು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು ಗ್ಯಾಸ್ ವಿತರಕರು,ಆಟೋ ಚಾಲಕರು,ಕೆ ಎಸ್ ಆರ್ ಟಿ ಸಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು,ಪಡಿತರ ವಿತರಣೆ ಮಾಡುವ ಅಂಗಡಿಯವರು,ಹಮಾಲರು,ಮತ್ತು ಅವರ ಕುಟುಂಬ ಸದಸ್ಯರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವದರಿಂದ ಕೊರೊನಾ ನಮ್ಮ ದೆಹಕ್ಕೆ ಹೆಚ್ಚಿನ ಹಾನಿ ಮಾಡುವದನ್ನು ತಡೆಯಬಹುದಾಗಿದೆ.ಎಂದರು. ಈ ವೇಳೆ ಪಂಚಾಯತಿ ಅಧ್ಯಕ್ಷ  ಜಯಶ್ರೀ ಅಲಬಾಳ,ಸಿದ್ದು ಬಾಹುಸಾಹೆಬ ಶಿಂಧೆ,ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.////

ಲಸಿಕೆ ತೆಗೆದುಕೊಂಡರೂ ಮುಂಜಾಗ್ರತೆ ಮರೆಯಬೇಡಿ – ಚನ್ನರಾಜ ಹಟ್ಟಿಹೊಳಿ

ಬೆಳಗಾವಿ –  ಹಿರೇಬಾಗೇವಾಡಿ ಗ್ರಾಮದಲ್ಲಿ  ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ಇನ್ನೋರ್ವ ಕಾಂಗ್ರೆಸ್ ಮುಖಂಡ ಸಿ ಸಿ ಪಾಟೀಲ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಕೋವಿಡ್ ಲಸಿಕೆಗಳ ( ವ್ಯಾಕ್ಸಿನೇಷನ್‌ ) ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ  ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಎಲ್ಲರೂ  ಕೋವಿಡ್ ಲಸಿಕೆಗಳನ್ನು ತೆಗೆದುಕೊಳ್ಳಬೇಕು. ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು‌ ಇರುವ ಮಾರ್ಗವೆಂದರೆ ಲಸಿಕೆ. ಈ ಕೋವಿಡ್ ಲಸಿಕೆ ಇವತ್ತಿನ ಸಮಯದಲ್ಲಿ ಸಂಜೀವಿನಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಲಿದೆ. ಆದಕಾರಣ ಎಲ್ಲರೂ ಕೋವಿಡ್ ಲಸಿಕೆಗಳಿಗೆ ಒಳಗಾಗಿ ಸೋಂಕಿನಿಂದ ದೂರವಿರಬೇಕು. ಲಸಿಕೆ ತೆಗೆದುಕೊಂಡು ನಂತರವೂ ಯಾವುದನ್ನೂ ನಿರ್ಲಕ್ಷ್ಯ ಮಾಡದೆ ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಸರ್ ಗಳ ಉಪಯೋಗಗಳನ್ನು ಮರೆಯಬಾರದು ಎಂದುವಿನಂತಿಸಿದರು.
ಈ ಸಂದರ್ಭದಲ್ಲಿ ದರ್ಗಾ ಅಜ್ಜನವರಾದ ಅಶ್ರಫ್ ಖಾದ್ರಿ, ಸಿ ಸಿ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ವಾತಿ ಇಟಗಿ, ಉಪಾಧ್ಯಕ್ಷರಾದ ನಾಜರಿನ್ ಕರಿದಾವಲ್, ಗೌರವ್ವ ಪಾಟೀಲ, ಶಮೀನಾ ನದಾಪ್, ಸುರೇಶ ಇಟಗಿ, ಬಿ ಜಿ ವಾಲೀಟಗಿ, ಶ್ರೀಕಾಂತ ಮಾಧುಬರಮಣ್ಣವರ, ಆನಂದ ಪಾಟೀಲ, ಗೌಸ್ ಜಾಲಿಕೊಪ್ಪ, ಗೌಡಪ್ಪ ಜಿರಲಿ, ಸೈಯದ್ ಸನದಿ, ಯಾಕುಬ್ ದೇವಲಾಪೂರ, ಸಿಪು ಹಳೆಮನಿ, ಬಸವರಾಜ ಹುಲಮನಿ, ಅನಿಲ ಪಾಟೀಲ, ಅಡಿವೆಪ್ಪ ತೋಟಗಿ, ಉಳವಪ್ಪ ರೊಟ್ಟಿ, ಸಮೀರ ಸುತಗಟ್ಟಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');